ಬಿಜೆಪಿ ಮುಖಂಡ ಸ್ವಾಮಿ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

-ಟಿ.ಬಿ.ಸಂತೋಷ, ಮದ್ದೂರು.
ಮದ್ದೂರು : ತಾಲೂಕಿನ ಗ್ರಾಮೀಣ ಭಾಗದ  ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ತಾಲೋಕಿನಾದ್ಯಂತ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದೇನೆ ಎಂದು ಮನ್‍ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ತಿಳಿಸಿದರು. ಕೆ.ಶೆಟ್ಟಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದ  ಆವರಣದಲ್ಲಿ ಆದಿಚುಂಚನಗಿರಿ ಆಸ್ಪತ್ರೆಯ ಸಹಕಾರದೊಂದಿಗೆ  ಕೆ.ಶೆಟ್ಟಹಳ್ಳಿ, ಮಾದರಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 
ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಕ್ಷೇತ್ರಾದ್ಯಂತ ಪ್ರತಿ 2 ಗ್ರಾಪಂ ವ್ಯಾಪ್ತಿಗೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಶ್ರೀನಿಧಿ ಪ್ರತಿμÁ್ಠನದ ವತಿಯಿಂದ ಉಚಿತವಾಗಿ ಬೆಂಗಳೂರಿನ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು. ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಕನ್ನಡಕಗಳನ್ನೂ ಸಹ ನೀಡಿ ಚಿಕಿತ್ಸೆ ಪಡೆದವರನ್ನು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಲಾಗುವುದು. ಇಂತಹ ಸೇವೆಗಳನ್ನು ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. 
ಸುಮಾರು 200 ಕ್ಕೂ ಹೆಚ್ಚು ಜನರು ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು.
ಗ್ರಾಪಂ ಮಾಜಿ ಸದಸ್ಯ ಜೆಸಿಬಿ ಶಿವಲಿಂಗು, ಮರಿಸ್ವಾಮಿ, ಗ್ರಾಪಂ ಸದಸ್ಯ ಸುಂದರೇಶ್, ರಘು, ಪಿಎಸ್ಇಎಸ್ ಪುಟ್ಟಸ್ವಾಮಿ, ಬೊಮ್ಮಲಿಂಗೇಗೌಡ, ಚಿಕ್ಕಹನುಮೇಗೌಡ,  ತೆಂಡೇಗೌಡ, ಬೋರೇಗೌಡ ಮುಂತಾದವರು ಉಪಸ್ಥಿತರಿದ್ದರು



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು