ಶಾರೂಕ್ ಖಾನ್, ಹನೂರು ಹನೂರು : ವಿದ್ಯುತ್ ತಂತಿ ಸ್ಪರ್ಷವಾಗಿ ಬೆಳೆದು ನಿಂತ ಕಬ್ಬು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಬೆಳತ್ತೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಮಾಲಾಪುರ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೆಳತ್ತೂರು ಗ್ರಾಮದಲ್ಲಿ ಸೋಮಣ್ಣ ಹಾಗೂ ಜಯಮ್ಮ ಅವರಿಗೆ ಸೇರಿದ ಪ್ರತ್ಯೇಕ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ವಿದ್ಯುತ್ ತಂತಿ ಸ್ಪರ್ಷವಾಗಿ ಕಟಾವು ಹಂತಕ್ಕೆ ಬಂದ್ದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‍ನಾಯ್ಕ, ಸಿಬ್ಬಂದಿಗಳಾದ ರವಿ, ಪ್ರವೀಣ್, ಗಿರೀಶ್, ನವೀನ್, ಆನಂದ್ ಪ್ರಮುಖ ಪಾತ್ರ ವಹಿಸಿದರು.
0 ಕಾಮೆಂಟ್‌ಗಳು