ಮಾರ್ಟಳಿ ಬಳಿ ಕುಸಿದು ಬಿದ್ದು ಬೆಡ್‌ಶೀಟ್ ವ್ಯಾಪಾರಿ ಸಾವು
ಡಿಸೆಂಬರ್ 10, 2022
ಶಾರುಕ್ ಖಾನ್, ಹನೂರು
ಹನೂರು : ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ
ಘಟನೆ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪ ನಡೆದಿದೆ. ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಈತ ಬೆಡ್‌ಶೀಟ್ ವ್ಯಾಪಾರ
ಮಾಡುತ್ತಿದ್ದು,ಹುಣಸೂರು ಮೂಲದವನು ಎನ್ನಲಾಗಿದೆ. ಈತ ಹನೂರು ವ್ಯಾಪ್ತಿಯಲ್ಲಿ ಬೆಡ್‌ಶೀಟ್
ವ್ಯಾಪಾರ ಮಾಡುತ್ತಿದ್ದನು. ಮಾರ್ಟಳ್ಳಿ ಸಮೀಪ ಶುಕ್ರವಾರ ರಾತ್ರಿ ಬೆಡ್‌ಶೀಟ್ ಮಾರುತ್ತಿದ್ದ ವೇಳೆ
ಇದ್ದಕ್ಕಿದ್ದಂತೆ ಕುಸಿದು ಬಿದ್ದನು ಈ ವೇಳೆ ಗ್ರಾಮಸ್ಥರು ಈತನನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ
ಕಳಿಸಿದರಾದರೂ ಈತ ಮೃತಪಟ್ಟನು ಎನ್ನಲಾಗಿದೆ.
0 ಕಾಮೆಂಟ್‌ಗಳು