ಕಾವೇರಿ ವನ್ಯಜೀವಿ ವಲಯದ ರಸ್ತೆಯಲ್ಲಿ ಕಾಣಿಸಿಕೊಂಡು ವಾಹನ ಸವಾರರ ಎದೆ ನಡುಗಿಸಿದ ಮತ್ತೊಂದು ಚಿರತೆ

ಶಾರುಕ್ ಖಾನ್, ಹನೂರು

ಹನೂರು : ತಿಂಗಳ ಹಿಂದೆ ದನಗಾಹಿ ವ್ಯಕ್ತಿಯೊಬ್ಬರನ್ನು ಕೊಂದು ಹಸು ಮತ್ತು ಮೇಕೆಗಳನ್ನು ಹೊತ್ತೊಯ್ದು ರಕ್ತ ಹೀರಿದ್ದ ನರಭಕ್ಷಕ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ನಂತರ ಮತ್ತೊಂದು ಚಿರತೆ ಶುಕ್ರವಾರ ರಾತ್ರಿ ರಸ್ತೆಯಲ್ಲಿ ಕಾಣಿಸಿಕೊಂಡು ವಾಹನ ಸವಾರರ ಎದೆ ನಡುಗಿಸಿದೆ.  
ಶುಕ್ರವಾರ ರಾತ್ರಿ 7 ಗಂಟೆಗೆ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯ ಕೆಂಚಯನದೊಡ್ಡಿ ಗ್ರಾಮದ ಅರಣ್ಯದ ರಸ್ತೆಯಲ್ಲಿ ಸಂಚರಿಸುತ್ತಿದ್ದ ತಾಲ್ಲೂಕಿನ ಎಲ್ಲೇಮಾಳ ಗ್ರಾಮದ ವೆಂಕಟೇಶ್, ತೌಸಿಫ್, ಫಯಾಜ್ ಎಂಬವರು ತಮ್ಮ ಕೆಲಸ ಮುಗಿಸಿಕೊಂಡು ಕೌದಳ್ಳಿಯಿಂದ ಕಾರಿನಲ್ಲಿ ಬರುತ್ತಿದ್ದಾಗ ಕೆಂಚಯನದೊಡ್ಡಿ ಗ್ರಾಮದ ಸಮೀಪದ ಅರಣ್ಯದಲ್ಲಿ ಈ ಚಿರತೆ ಕಾಣಿಸಿಕೊಂಡಿದೆ. ಕೂಡಲೇ ವಾಹನ ಸವಾರರು ತಮ್ಮ ಮೊಬೈಲ್‍ನಲ್ಲಿ ಚಿರತೆಯ ಚಿತ್ರವನ್ನು ಸೆರೆಹಿಡಿದ್ದಾರೆ. ಘಟನೆಯಿಂದ ಮತ್ತೆ ಗ್ರಾಮಸ್ಥರಲ್ಲಿ ಭಯ ಕಾಣಿಸಿಕೊಂಡಿದೆ. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು