ಸಿದ್ದರಾಮಯ್ಯ ಆರೋಗ್ಯ ಸುಧಾರಿಸಲು ನೂರೋಂದು ಗಣಪತಿಗೆ ವಿಶೇಷ ಪೂಜೆ
ಡಿಸೆಂಬರ್ 03, 2022
ಮೈಸೂರು : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇಗ ಗುಣಮುಖರಾಗಲಿ ಎಂದು ಶುಭ ಹಾರೈಸಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಹಿಂದ ನಟರಾಜ್, ಚಂದ್ರು, ಕಂಸಾಳೆ ರವಿ, ನಾಗೇಂದ್ರ, ರಮೇಶ್, ಸಂತೋμï ಕಿರಾಳ್, ಕನಕಗಿರಿ ಶಿವು, ರಾಜಕುಮಾರ್, ವಾಟರ್ ವಕ್ರ್ಸ್ ಮನು, ಕನಕಗಿರಿ ಸಿದ್ದರಾಮ, ಮೋಹನ್ ಇತರರು ಇದ್ದರು.