ಉದಯಗಿರಿ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣ ದಾಖಲು 66,500 ರೂ. ದಂಡ ವಸೂಲಿ
ಮೈಸೂರು : ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ನಗರದಾದ್ಯಂತ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಸಮರ ಸಾರಿರುವ ಮೈಸೂರು ಪೊಲೀಸರು, ಶುಕ್ರವಾರವೂ ಕಾರ್ಯಾಚರಣೆ ಮುಂದುವರಿಸಿ 1901 ವಾಹನಗಳ ತಪಾಸಣೆ ನಡೆಸಿ 2.27 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಬಹುತೇಕ ನಗರದ ಸಂಚಾರ ದಟ್ಟಣೆ ಇರುವ ಎಲ್ಲಾ ರಸ್ತೆಗಳಲ್ಲೂ ವಾಹನ ತಪಾಸಣೆ ನಡೆಸಲಾಯಿತು. ಸವಾರರು ಊಹಿಸಲು ಅಸಾಧ್ಯವಾದಂತಹ ಸ್ಥಳಗಳಲ್ಲಿ ಪೊಲೀಸರು ನಿಂತು ವಾಹನ ತಪಾಸಣೆ ನಡೆಸಿದರು. ಒಟ್ಟಾಗಿ ಶುಕ್ರವಾರ ರಾತ್ರಿ ತನಕವೂ ತಪಾಸಣೆ ನಡೆಯಿತು. ಸುಮಾರು 1901 ವಾಹನಗಳನ್ನು ತಪಾಸಣೆ ಮಾಡಿ 455 ಪ್ರಕರಣಗಳನ್ನು ದಾಖಲಿಸಿ, 2.27 ಲಕ್ಷ ರೂ. ದಂಡ ವಸೂಲಿ ಮಾಡಲಾಯಿತಲ್ಲದೇ, 19 ವಾಹನಗಳನನು ಜಪ್ತಿ ಮಾಡಲಾಯಿತು.
ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಂದರೇ385 ವಾಹನಗಳ ತಪಾಸಣೆ ನಡೆಸಲಾಗಿ 133 ಪ್ರಕರಣ ದಾಖಲಿಸಿ 66,500 ರೂ. ದಂಡ ವಸೂಲಿ ಮಾಡಲಾಯಿತು. ಜತೆಗೆ 9 ವಾಹನಗಳನ್ನು ಜಪ್ತಿ ಮಾಡಲಾಯಿತು.
ಅಶೋಕಾಪುರಂ ಠಾಣಾ ವ್ಯಾಪ್ತಿಯಲ್ಲಿ ಕೇವಲ 18 ವಾಹನಗಳ ತಪಾಸಣೆ ನಡೆಸಲಾಯಿತಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಜತೆಗೆ ಇಲ್ಲಿ ದಂಡವನ್ನೂ ಸಹ ವಸೂಲಿ ಮಾಡಿಲ್ಲ.
0 ಕಾಮೆಂಟ್‌ಗಳು