ನರಭಕ್ಷಕ ಚಿರತೆಗೆ ಮತ್ತೊಂದು ಬಲಿ : ಬಹಿರ್ದೆಸೆಗೆ ಹೋಗಿದ್ದ ಯುವತಿಯನ್ನು ಕೊಂದು ಹಾಕಿದ ಚಿರತೆ

ತಿ.ನರಸೀಪುರ: ಒಂದು ತಿಂಗಳ ಹಿಂದೆಯμÉ್ಟೀ ಚಿರತೆ ದಾಳಿಯಿಂದ ತಾಲ್ಲೂಕಿನ ಎಂ.ಎಲ್.ಹುಂಡಿ ಗ್ರಾಮದ ಯುವಕನೊಬ್ಬ ಬಲಿಯಾದ ಘಟನೆ ಮಾಸುವ ಮುನ್ನವೇ ನರಭಕ್ಷಕ ಚಿರತೆ ಮತ್ತೊಂದು  ಬಲಿಯನ್ನು ಪಡೆದಿದ್ದು, ಬಹಿರ್ದೆಸೆಗೆ ಹೋಗಿದ್ದ ಯುವತಿಯನ್ನು ಚಿರತೆ ಕೊಂಡು ಹಾಕಿದೆ. 
ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ರಮೇಶ್ ನಾಯಕ ಎಂಬವರ ಪುತ್ರಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (22) ಎಂಬ ಯುವತಿಯು ಚಿರತೆ ದಾಳಿಗೆ ತುತ್ತಾಗಿದ್ದು, ತಾಲೂಕಿನಲ್ಲಿ ಚಿರತೆ ದಾಳಿ ಇದು ಎರಡನೇ ಬಲಿಯಾಗಿದೆ. 
ಯುವತಿ ಬಹಿರ್ದೆಸೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಕೂಡಲೇ ಯುವತಿಯನ್ನು ಚಿಕಿತ್ಸೆಗಾಗಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಪ್ರಾಣ  ಕಳೆದುಕೊಂಡಂತಾಗಿದೆ.

ಚಿರತೆ ಹಿಡಿಯುವಂತೆ ಸಾರ್ವಜನಿಕರು, ಮಠಾಧೀಶರು ನಿನ್ನೆಯಷ್ಟೆ ಪ್ರತಿಭಟನೆ ನಡೆಸಿದ್ದರೂ, ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳಕ್ಕೆ ಶಾಸಕ ಅಶ್ವಿನ್ ಕುಮಾರ್ ಭೇಟಿ ನೀಡಿ ದುರ್ಘಟನೆಗೆ ಸಂತಾಪ ಸೂಚಿಸಿದರು. ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು  ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು