ಟಿ. ನರಸೀಪುರದಲ್ಲಿ ನರಭಕ್ಷಕ ಚಿರತೆ ಸೆರೆ : ಇನ್ನೂ ೧೮ ಚಿರತೆಗಳಿವೆ ಎಂದು ಜನರ ತಲೆಗೆ ಹುಳ ಬಿಟ್ಟ ಅಧಿಕಾರಿಗಳು

 ನಾಗೇಂದ್ರ ಕುಮಾರ್‌, ಟಿ.ನರಸೀಪುರ
ಟಿ.ನರಸೀಪುರ : ಇಬ್ಬರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆಯಾಗಿದ್ದು,  ಸಾರ್ವಜನಿಕರು ನಿಟ್ಟುಸಿರು ಬಿಡುವ ಮುನ್ನ ಈ ಭಾಗದಲ್ಲಿ ಇನ್ನೂ ೧೮ ರಿಂದ ೨೦ ಚಿರತೆಗಳಿವೆ ಹುಷಾರು ಎಂದು ಅರಣ್ಯಾಧಿಕಾರಿಗಳು ಸಾರ್ವಜನಿಕರಗೆ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಎಂ.ಎಲ್.ಹುಂಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ತೋಡಿದ್ದ ಖೆಡ್ಡಾಕ್ಕೆ ಬಿದ್ದ ಈ ನರಹಂತಕ ಚಿರತೆ ಕಳೆದ ಎರಡು ತಿಂಗಳಿನಿಂದ ಈ ಭಾಗದ ಜನತೆಯ ನಿದ್ದೆಗೆಡಿಸಿತ್ತು. ಅಲ್ಲದೇ ಅರಣ್ಯ ಇಲಾಖೆಗೂ ಚಿರತೆ ಸೆರೆ ಹಿಡಿಯುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಚಿರತೆಯನ್ನು ತಮ್ಮ ಬುದ್ಧಿಶಕ್ತಿ ಬಳಸಿ ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಕೊಂದು ,ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಲವಾರು ಮೇಕೆ, ಕುರಿ, ಕೋಳಿ, ದನ, ಕರುಗಳನ್ನು ಬಲಿ ಪಡೆದಿದ್ದ  ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆ ಹಲವು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿತ್ತು.
ಮೂರರಿಂದ ನಾಲ್ಕು ಕರುಗಳನ್ನು  ದೊಡ್ಡ ಬೋನಿನಲ್ಲಿ ಹಾಕಿ, ಅದು ನಿರಾಳವಾಗಿ ತಿನ್ನಲು ಬಿಟ್ಟು ಅದಕ್ಕೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ  ಕಾರ್ಯಾಚರಣೆ ನಡೆಸಿ ಇಂದು ಬೆಳಗಿನ ಜಾವ ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ಟಿ.ನರಸೀಪುರ ತಾಲ್ಲೂಕಿನಲ್ಲಿಇನ್ನೂ ೧೮ ರಿಂದ ೨೦ ಚಿರತೆಗಳಿರುವ ಮಾಹಿತಿಯನ್ನು ಅರಣ್ಯ ಇಲಾಖೆ ನೀಡಿದ್ದು, ಅದರಲ್ಲಿ  ಚಿರತೆಯೇ ನರಭಕ್ಷಕವೆಂದು ತಿಳಿಸಿದ್ದಾರೆ.

 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು