ಮಲೆ ಮಹದೇಶ್ವರ ಬೆಟ್ಟದ ಬಳಿಯ `ತಪ್ಸರೇ’ಯಲ್ಲಿ ಮೊದಲ ಧನುರ್ಮಾಸದ ವಿಶೇಷ ಪೂಜೆ.

ವರದಿ: ಶಾರೂಕ್ ಖಾನ್, ಹನೂರು 
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದ ಕೊಕ್ಕೆನೋರೆ ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಪ್ಸರೇ ಯಲ್ಲಿ ಇಂದು ಬೆಳಿಗ್ಗೆ ಧನುರ್ಮಾಸದ ವಿಶೇಷ ಪೂಜೆ ನಡೆಯಿತು.
ಮಲೆ ಮಹದೇಶ್ವರರು ಶ್ರವಣಾಸುರನನ್ನು ಸಂಹಾರ ಮಾಡುವ ಮೊದಲು ತಪ್ಪಸ್ಸನ್ನು ಆಚರಿಸಿದ ಸ್ಥಳವೇ ತಪಸಾರೆ ಅಥವಾ ತಪ್ಸರೇಯಾಗಿದೆ ಎನ್ನಲಾಗಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಹೊಗುವ 4-5 ಕಿಮೀ ಮುನ್ನವೇ ಸಿಗುವ ಹಾಲಹಳ್ಳದ ಬಳಿಯ ಬಸ್ ನಿಲ್ದಾಣದಿಂದ ಸುಮಾರು 5 ಕಿಮೀ ನಡಿಗೆಯಲ್ಲಿ ಹೊಗಬೇಕು. ನಂತರ ಕೊಕ್ಕಬೋರೆ ಎಂಬ ಪುಟ್ಟ ಹಳ್ಳಿ ಸಿಗುತ್ತದೆ. ಸುಮಾರು ಅರವತ್ತು ಮನೆಗಳು ಇದ್ದು, ತಮ್ಮಡಿಗಳು ವಾಸಿಸುವ ಸ್ಥಳ ಇದಾಗಿದೆ, ಅಲ್ಲಿಂದ ಎರಡು ಕಿಮೀ ನಡೆದರೆ ತಪ್ಸರೇ ಸಿಗುತ್ತದೆ ಇಲ್ಲಿ ಪ್ರತಿ ವರ್ಷದ ಧನುರ್ಮಾಸದ ಮೊದಲ ಸೋಮವಾರದಂದು
ಶ್ರೀಸಾಲೂರು ಬೃಹನ್ಮಠದ ವತಿಯಿಂದ ಪರ ನಡೆಯುತ್ತದೆ.
ಈ ಬಾರಿ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಅಭಿμÉೀಕ ಪೂಜೆ ನಡೆಯಿತು. 
ಸೋಮವಾರ ರಾತ್ರಿ 8 ಗಂಟೆಗೆ ಅಭಿμÉೀಕ ಪೂಜೆ ಶತಶಿವನಾಮ ಬಿಲ್ವಾರ್ಚನೆ ನೆರವೇರಿಸಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಆಣೆಹೊಲ, ಪೊನ್ನಾಚಿ, ತುಂಚಳಿ, ನಾಗಮಲೆ, ಹಳೆಯೂರು, ಮಾರಿವಲ, ಕೊಕ್ಕಾಬೋರೆ, ಹನೂರು, ಬಂಡಳ್ಳಿ, ಕೊಳ್ಳೇಗಾಲ, ಕನಕಪುರ, ಬೆಂಗಳೂರು, ನಾನಾ ಊರಿನಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.
ಸ್ವಾಮೀಜಿಗಳೇ ಭಕ್ತಾದಿಗಳಿಗೆ ಪ್ರಸಾದವನ್ನು ಬಡಿಸಿದರು.
ಭಕ್ತರು ವಿಶೇಷವಾಗಿ ತಯಾರಿಸಲಾದ ರಾಗಿ ಮುದ್ದೆ, ಹಲಸಿನಹುಳಿ ಸಾರು, ಪಾಯಸ, ತುಪ್ಪ, ಕಜ್ಜಾಯ ಹಾಗೂ ಹಪ್ಪಳವನ್ನು ಸವಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು