ಮತ್ತೇ ಮುಖ್ಯಮಂತ್ರಿಯಾಗುವ ಆಸೆ ಇಲ್ಲ! : ಹೆಚ್.ಡಿ.ಕುಮಾರಸ್ವಾಮಿ

ರೈತರ ಕಣ್ಣೊರೆಸಲು ಇದೊಂದು ಬಾರಿ ಅವಕಾಶ ನೀಡಿ  

ಮಳವಳ್ಳಿ : ಎರಡು ಬಾರಿ ಮುಖ್ಯಮಂತ್ರಿ ಆಗಿರುವ ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ ಆದರೆ, ನಾಡಿನ ಬಡವರು ಮತ್ತು ರೈತರ ಕಣ್ಣೀರು ಒರೆಸಲು ಉತ್ತಮ ಆಡಳಿತ ನೀಡುವ ಸಲುವಾಗಿ ನನಗೆ ಇದೊಂದು ಬಾರಿ ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.
ಪಂಚರತ್ನ ಯಾತ್ರೆ ಹಲಗೂರಿಗೆ ಆಗಮಿಸಿದ ವೇಳೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ನನಗೆ ಯಾವುದೇ ಜಾತಿ ಧರ್ಮ ಇಲ್ಲ. ಬಡತನವೇ ನನ್ನ ಜಾತಿ. ಇದನ್ನು ನಿವಾರಿಸಿ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುವುದೇ ನನ್ನ ಗುರಿ. ಹೀಗಾಗಿ ಇದೊಂದು ಬಾರಿ ಅವಕಾಶ ನೀಡಿದರೆ ರೈತರ, ಬಡವರ ಪರವಾದ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಅಭಿಮಾನಿಗಳು ಹಲಗೂರಿನಲ್ಲೂ ಸಹ ಹೆಚ್‍ಡಿಕೆಗೆ ಕ್ರೇನ್ ಮೂಲಕ ಬಾರಿ ಸೇಬಿನ ಹಾರ ಹಾಕಿ, ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತ ನೀಡಲಾಯಿತು. 
ಮಾಜಿ ಸಚಿವ ಸಿಎಚ್ ಪುಟ್ಟರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂಬಿ ರಮೇಶ್, ಶಾಸಕ ಅನ್ನದಾನಿ, ತಾಲೂಕು ಜೆಡಿಎಸ್ ಅಧ್ಯಕ್ಷ ವಿಶ್ವನಾಥ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ  ರವಿ ಸೇರಿದಂತೆ ಹಲವಾರು ಮುಖಂಡರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು