ಸರ್ಕಾರವನ್ನು ಅಭಿನಂದಿಸಿದ ಸಂಘದ ಪದಾಧಿಕಾರಿಗಳು
ವರದಿ ಶಾರೂಕ್ ಖಾನ್ ಹನೂರು
ಹನೂರು : ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ವೃಂದದ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ನಾಮಕರಣ ಮಾಡಿ ಸರ್ಕಾರ ಆದೇಶ ಮಾಡಿರುವುದಕ್ಕೆ ಹನೂರು ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ರಾಜು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪಂಚಾಯತಿಗಳಲ್ಲಿ ಪಿಡಿಓ ಹೇಗೆ ಆಡಳಿತ ನಡೆಸುತಾರೋ ಅದೇ ಮಾದರಿಯಲ್ಲಿ ಗ್ರಾಮ ಲೆಕ್ಕಿಗರು ಇನ್ನು ಮುಂದೆ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇದುವರೆಗೆ ದಕ್ಷಿಣ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಚಾಲ್ತಿಯಲಿತ್ತು. ಅದರಂತೆ ಕರ್ನಾಟಕದಲ್ಲಿಯೂ ಹುದ್ದೆಯನ್ನು ಬದಲಾಯಿಸುವಂತೆ ಗ್ರಾಮ ಲೆಕ್ಕಿಗರ ಸಂಘ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿತ್ತು.
ಇದಕ್ಕೆ ಕಂದಾಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಂದಾಯ ಇಲಾಖೆಯ ಅದೀನ ಕಾರ್ಯದರ್ಶಿ ಹರೀಶ್ ಅವರು ಇಂದು ನೂತನ ಆದೇಶ ಹೊರಡಿಸಿದ್ದು ನಮಗೆಲ್ಲಾ ಸಂತರ ತಂದಿದೆ ಎಂದು ರಾಜು ಮೈಸೂರ್ ಮೇಲ್.ಕಾಂ ನೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ವಿನೋದ್, ಶೇಷಣ್ಣ, ಕಾರ್ತಿಕ್, ಪುನೀತ್ ಕುಮಾರ್, ಮಾರುತಿ, ರಮೇಶ್, ಮಹಾದೇವ ಪ್ರಸಾದ್ ಇದ್ದರು.
0 ಕಾಮೆಂಟ್‌ಗಳು