ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ `ಟಿಪ್ಪು ನಿಜ ಕನಸುಗಳು’ ನಾಟಕ ಪ್ರದರ್ಶನಕ್ಕೆ ಅವಕಾಶ : ಮತ್ತೊಮ್ಮೆ ವಿವಾದದತ್ತ ರಂಗಾಯಣ
ಡಿಸೆಂಬರ್ 02, 2022
ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿ.8 ರಿಂದ 15 ರವರೆಗೆ ರಂಗಾಯಣದ ಆವರಣದಲ್ಲಿ ನಡೆಯಲಿದ್ದು, `ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ರಂಗಾಯಣ ಮತ್ತೊಮ್ಮೆ ವಿವಾದಕ್ಕೀಡಾಗಿದೆ. ರಂಗಾಯಣದ ಆವರಣದಲ್ಲಿ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಮಾಧ್ಯಮದವರು ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ವಿವಾದಾತ್ಮಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ, ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅಡ್ಡಂಡ ಸಿ.ಕಾರ್ಯಪ್ಪ, ಇದು ನಿಮಗೆ ವಿವಾದಾತ್ಮಕ ಇರಬಹುದು ನಮಗಲ್ಲ, ಜಿಲ್ಲಾಧಿಕಾರಿಗಳು ಅದ್ಯಾವುದನ್ನು ನಮಗೆ ಹೇಳಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದರು. ಈ ನಾಟಕ ಪ್ರದರ್ಶನದಲ್ಲೂ ಮಾಧ್ಯಮದವರನ್ನು ಹೊರಗೆ ನಿಲ್ಲಿಸಲಾಗುವುದೇ ಎಂಬ ಪ್ರಶ್ನೆಗೆ ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದರು. ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನದ ವೇಳೆ ಪೊಲೀಸ್ ಕಣ್ಗಾವಲಿನಲ್ಲಿ ಪ್ರೇಕ್ಷಕರು ನಾಟಕ ವೀಕ್ಷಿಸುವಂತೆ ಮಾಡಿದ್ದು ಸರಿಯೇ ಎಂದಿದ್ದಕ್ಕೆ ಕೆಲವರು ಗಲಾಟೆ ಮಾಡುತ್ತೇವೆ ಎಂದು ಹೇಳಿದ್ದರು. ಹಾಗಾಗಿ ಪೊಲೀಸ್ ರಕ್ಷಣೆ ಕೋರಲಾಯಿತು. ಬಹುರೂಪಿ ವೇಳೆಯೂ ನಮಗೆ ಹೊಡೆಯುತ್ತೇವೆ ಎಂದರೆ ಇಲ್ಲಿಗೂ ಪೊಲೀಸ್ ರಕ್ಷಣೆ ಪಡೆಯಬೇಕಾಗುತ್ತದೆ ಎಂದು ಹೇಳಿದರು. ಡಿ.8 ರಿಂದ 15 ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಡೆಯಲಿದ್ದು, ಈ ರಂಗೋತ್ಸವದಲ್ಲಿ 7 ರಾಜ್ಯಗಳ 7 ವಿವಿಧ ಭಾμÉಗಳ ನಾಟಕಗಳು, ಕರ್ನಾಟಕದ 12 ಕನ್ನಡ ನಾಟಕಗಳು ಮತ್ತು ತುಳು ನಾಟಕವು ಸೇರಿ ಒಟ್ಟು 20 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು. ಇದರೊಂದಿಗೆ ಜಾನಪದ ಕಲಾಪ್ರದರ್ಶನ, ರಾಷ್ಟ್ರೀಯ ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ದೇಸಿ ಆಹಾರ ಮೇಳ ಮತ್ತು ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಮುಂತಾದ ಹಲವು ಬಗೆಯ ಕಾರ್ಯಕ್ರಮಗಳು ರಂಗಾಯಣದ ರಂಗಮಂದಿರಗಳಾದ ಭೂಮಿಗೀತ, ಕಲಾಮಂದಿರ, ವನರಂಗ, ಬಿ.ವಿ.ಕಾರಂತ, ರಂಗಚಾವಡಿ ಹಾಗೂ ಸಂಪತ್ ರಂಗಮಂದಿರದಲ್ಲಿ ನಡೆಯಲಿದೆ ಎಂದರು. ಈ ಬಾರಿಯ ರಾಷ್ಟ್ರೀಯ ರಂಗೋತ್ಸವವನ್ನು ಭಾರತೀಯತೆ ಎಂಬ ಶೀರ್ಷಿಕೆಯಲ್ಲಿ ನಡೆಸಲಾಗುತ್ತಿದೆ. ಡಿ.8 ರಂದು ಜಾನಪದೋತ್ಸವ ಉದ್ಘಾಟನೆಗೊಳ್ಳಲಿದ್ದು, ಡಿ.9 ರಂದು ರಾಷ್ಟ್ರೀಯ ವಿಚಾರ ಸಂಕಿರಣ, ಡಿ.10 ರಂದು ರಾಷ್ಟ್ರೀಯ ರಂಗೋತ್ಸವದ ನಾಟಕಗಳ ಹಬ್ಬ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದು, ನವದೆಹಲಿಯ ರಾಷ್ಟ್ರಿಯ ರಂಗ ಶಾಲೆ ಅಧ್ಯಕ್ಷ ಪರೇಶ್ ರಾವಲ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ಮೈಸೂರು ಮೇಯರ್ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಡಿ.9 ಮತ್ತು ಡಿ. 11 ರಂದು ಸನಾತನ ಧರ್ಮ ಮತ್ತು ಭಾರತೀಯತೆ, ಮತ್ತು ಭವಿಷ್ಯದಲ್ಲಿ ಭಾರತೀಯ ಸಂಸ್ಕøತಿ ಎಂಬ ವಿಚಾರಗಳ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು ವಿಚಾರ ಸಂಕಿರಣದಲ್ಲಿ ಚಿಂತಕರು ಲೇಖಕರಾದ ಡಾ.ಎಸ್.ಆರ್.ಲೀಲಾ, ನಾಟಕಕಾರ ಎಸ್.ಎನ್,ಸೇತುರಾಮ್, ಡಾ.ಆರತಿ ಬಿ.ವಿ., ರಮಾನಂದ ಐನಕೈ, ಸಾಹಿತಿ ಬಾಬು ಕೃಷ್ಣಮೂರ್ತಿ, ಸು.ರಾಮಣ್ಣ ಭಾಗವಹಿಸಲಿದ್ದಾರೆ. ಇದೇ ವೇಳೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ಈ ನಾಟಕ ಪ್ರವೇಶಕ್ಕೆ 100 ರೂ. ಶುಲ್ಕ ವಿಧಿಸಲಾಗಿದ್ದು, ಆನ್ ಲೈನ್ ಮೂಲಕವೂ ಟಿಕೆಟ್ ಪಡೆಯಬಹುದಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಆಡಳಿತಾಧಿಕಾರಿ ಜಯಶಂಕರ್ ಎಚ್.ಎಂ ಉಪಸ್ಥಿತರಿದ್ದರು.
ನಾಟಕ ಪ್ರದರ್ಶನ ಮಾಡಬೇಡಿ ಎಂದಿಲ್ಲ
ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ ಮಾಡಬೇಡಿ ಎಂದಿಲ್ಲ, ಕಾರ್ಯಕ್ರಮದಲ್ಲಿ ಗಲಾಟೆ ಆಗದ ರೀತಿ ನೋಡಿಕೊಳ್ಳಿ ಎಂದಿದ್ದಾರμÉ್ಟ. - ನಿರ್ಮಲಾ ಮಠಪತಿ, ಉಪನಿರ್ದೇಶಕಿ, ರಂಗಾಯಣ, ಮೈಸೂರು.
0 ಕಾಮೆಂಟ್‌ಗಳು