ವಿ.ವಿ.ಪುರಂ ಪೊಲೀಸರಿಂದ ಒಬ್ಬ ದ್ವಿ ಚಕ್ರ ವಾಹನ ಕಳ್ಳನ ಬಂಧನ : 95 ಸಾವಿರ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳ ವಶ
ಡಿಸೆಂಬರ್ 23, 2022
ಮೈಸೂರು ನಗರದ
ವಿ.ವಿ.ಪುರಂ ಪೊಲೀಸರು ಯಾದವಗಿರಿ ರೈಲ್ವೇ ಟ್ರಾಕ್ ಬಳಿ
ಒಬ್ಬ ಕಳ್ಳನನ್ನು ಬಂಧಿಸಿ ನಗರದ ವಿವಿಧ ಸ್ಥಳಗಳಲ್ಲಿ ಕಳವು ಮಾಡಿದ್ದ 95 ಸಾವಿರ ರೂ, ಮೌಲ್ಯದ 4 ದ್ವಿ
ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ವಿ.ವಿ.ಪುರಂ,
ಹೆಬ್ಬಾಳ್, ದೇವರಾಜ, ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಬೈಕ್‌ಗಳನ್ನು ಕಳವು ಮಾಡಿದ್ದು
ಪತ್ತೆಯಾಗಿದೆ. ಡಿಸಿಪಿ ಎಂ.,ಎಸ್.
ಗೀತ ನರಸಿಂಹರಾಜ ವಿಭಾಗದ ಎಸಿಪಿ ಎಂ. ಶಿವಶಂಕರ್ ನೇತೃತ್ವದಲ್ಲಿ ವಿ.ವಿ.ಪುರಂ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್
ಎಂ. ಮೋಹನ್ ಕುಮಾರ್, ಎಎಸ್ಐ
ನಾಗರಾಜ ನಾಯ್ಕ ಸಿಬ್ಬಂದಿಗಳಾದ ಪ್ರಸನ್ನ, ರವಿಗೌಡ, ಪರಶುರಾಮ ರಾಥೋಢ, ಮಹೇಶ್, ಈರಣ್ಣ, ಉಮೇಶ್, ಚೆಲುವರಾಜ್,
ಭಾಷಾಸಾಬ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್‌ಗಳು