ಅಂಡರ್ ಗ್ರೌಂಡ್‍ನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ 7 ಜನರ ಬಂಧನ : 33,500 ರೂ. ನಗದು ವಶ
ಡಿಸೆಂಬರ್ 19, 2022
ಮೈಸೂರು: ನಗರದ ಹೆಬ್ಬಾಳು 2ನೇ ಹಂತದ ಮನೆಯೊಂದರ ನೆಲ ಅಂತಸ್ತಿನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ 7 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿ 33,500 ರೂ. ನಗದು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಎಂ.ಎಸ್.ಗೀತಾ ಸಿಸಿಬಿ ಎಸಿಪಿ ಅಶ್ವಥ್ ನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಮಲ್ಲೇಶ್, ಪಿಎಸ್‍ಐ ಗಳಾದ ಪ್ರತಿಭಾ ಜಂಗವಾಡ, ಸೈಯಿದಾ ಅಮ್ರಿನ್ ಮತ್ತು ಸಿಬ್ಬಂದಿಗಳಾದ ರಾಜು, ಜೋಸೆಫ್ ನರ್ಹೋನಾ, ರಾಧೇಶ್, ರವಿ ಕುಮಾರ್, ಸುಭಾನುಲ್ಲಾ, ದಾಳಿಯಲ್ಲಿ ಪಾಲಗೊಂಡಿದ್ದರು. ಮೈಸೂರು ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ದಾಳಿಯನ್ನು ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು