ಸೆನ್ ಕ್ರೈಂ ಪೊಲೀಸರಿಂದ 30 ಸಾವಿರ ರೂ. ಮೌಲ್ಯದ 1 ಕೆ.ಜಿ. 208 ಗ್ರಾಂ ಗಾಂಜಾ ವಶ : ಇಬ್ಬರ ಬಂಧನ

ಮೈಸೂರು : ನಗರದ ಸೆನ್ ಕ್ರೈಂ ವಿಭಾಗದ ಪೊಲೀಸರು ಇಂದು ಬೆಳಿಗ್ಗೆ ಡಾ.ರಾಜಕುಮಾರ್ ರಸ್ತೆ, ವಾಟರ್ ಸಪ್ಲೈ ಕಚೇರಿ ಹಿಂಭಾಗದ ರಸ್ತೆಯಲ್ಲಿ ದಾಳಿ ನಡೆಸಿ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 30 ಸಾವಿರ ರೂ. ಮೌಲ್ಯದ 1ಕೆ.ಜಿ.208 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಡಿಸಿಪಿ ಪ್ರದೀಪ್‍ಗುಂಟಿ, ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್ ಮಾರ್ಗದರ್ಶನದಲ್ಲಿ ಮೈಸೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಎನ್.
ಜಯಕುಮಾರ್ ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು