31 ರಾತ್ರಿ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ

ಮೈಸೂರು: ಹೊಸ ವರ್ಷಾಚಾರಣೆಯ ಹುರುಪಿನಲ್ಲಿ ಡಿ.31 ರ ರಾತ್ರಿ ಜನರು ಚಾಮುಂಡಿಬೆಟ್ಟದ ರಸ್ತೆಗಳಲ್ಲಿ ಯುವಕರು ಮದ್ಯಪಾನ ಮಾಡಿ, ರಸ್ತೆಗಳಲ್ಲಿ ಕೂಗಾಡುತ್ತಾ ಅಪಘಾತವನ್ನು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣ 31 ರ ರಾತ್ರಿ 9 ಗಂಟೆಯಿಂದ ಜನವರಿ,1 ಬೆಳಿಗ್ಗೆ 5 ಗಂಟೆ ವರೆಗೆ ಚಾಮುಂಡಿಬೆಟ್ಟದಲ್ಲಿ ಕಲಂ 144 ಜಾರಿ ಮಾಡಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಇತರ ಸಾರ್ವಜನಿಕರಿಗೆ ಹಾಗೂ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಮೈಸೂರು ಪೊಲೀಸ್‌ ಆಯುಕ್ತ ಬಿ.ರಮೇಶ್‌ ಆದೇಶಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು