ಸಿಸಿಬಿ ಬಲೆಗೆ ಬಿದ್ದ ಗಾಂಜಾ ಮಾರಾಟಗಾರ : 1.30 ಲಕ್ಷ ರೂ ಮೌಲ್ಯದ 2 ಕೆ.ಜಿ. 710 ಗ್ರಾಂ ಗಾಂಜ ವಶ

ಮೈಸೂರು: ನಗರದ ವಿ.ವಿ.ಮೊಹಲ್ಲಾ ಸತ್ಯ ಪ್ರಮೋದ ಕಲ್ಯಾಣ ಮಂಟಪದ ಬಳಿ ಒಬ್ಬ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು. ಆತನ ವಶದಲ್ಲಿದ್ದ 1.30 ಲಕ್ಷ ರೂ. ಮೌಲ್ಯದ 2 ಕೆ.ಜಿ 710 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 ಡಿಸಿಪಿ ಎಂ.ಎಸ್. ಗೀತ, ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಹೆಚ್ ಮತ್ತು ಬಿ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಶೇಖರ್, ಸಿಬ್ಬಂದಿಗಳಾದ ಸಲೀಂಪಾಷ, ಟಿ.ಪ್ರಕಾಶ್, ಎ.ಉಮಾಹೇಶ್ ಮತ್ತು ಗೋವಿಂದ ದಾಳಿಯಲ್ಲಿ ಭಾಗವಹಿಸಿದ್ದರು
.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು