ಲಾಡ್ಜ್‍ನಲ್ಲಿ ಜೂಜು : ಐದು ಜನರ ಬಂಧನ, 58 ಸಾವಿರ ನಗದು ವಶ
ಡಿಸೆಂಬರ್ 30, 2022
ಮೈಸೂರು : ಲಾಡ್ಜ್‍ವೊಂದರಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದ ಐದು ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 58 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣ ವಿಲಾಸ ರಸ್ತೆಯ ಐಸಿರಿ ರೆಸಿಡೆನ್ಸಿ ಲಾಡ್ಜ್‍ನ ರೂಂ ಸಂಖ್ಯೆ-1ರ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಡಿಸಿಪಿ ಎಂ.ಎಸ್.ಗೀತಾ ಸಿಸಿಬಿ ಎಸಿಪಿ ಸಿ.ಕೆ. ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಮಲ್ಲೇಶ್, ಎಎಸ್‍ಐ ರಾಜು ಸಿಬ್ಬಂದಿಗಳಾದ ಅನಿಲ್, ರಾಧೇಶ್, ಜನಾರ್ಧನ್‍ರಾವ್, ರವಿಕುಮಾರ್, ಶ್ರೀನಿವಾಸ್ ಮತ್ತು ಅರುಣ್‍ಕುಮಾರ್ ದಾಳಿಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಆಯುಕ್ತ ಬಿ.ರಮೇಶ್ ದಾಳಿಯನ್ನು ಪ್ರಶಂಸಿಸಿದ್ದಾರೆ.
0 ಕಾಮೆಂಟ್‌ಗಳು