ಯುವಕನ ಅಪಹರಿಸಿ ಕೊಲೆ ಶಂಕೆ : ಮಹಿಳಾ ಪೊಲೀಸ್ ಪೇದೆ ವಿರುದ್ಧ ಆರೋಪ, ಪ್ರತಿಭಟನೆ
ಡಿಸೆಂಬರ್ 31, 2022
ಟಿ.ನರಸೀಪುರ : ಕಳೆದ ಭಾನುವಾರ ತಾಲ್ಲೂಕಿನ ಹೊಸ ನರೀಪುರ ಗ್ರಾಮದಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ತಲಕಾಡು ಸಮೀಪದ ಕಾವೇರಿಪುರ ಸೇತುವೆ ಬಳಿ ಪತ್ತೆಯಾಗಿದ್ದು, ಇದೊಂದು ವ್ಯವಸ್ಥಿತ ಕೊಲೆ, ಮಳವಳ್ಳಿ ಠಾಣೆಯ ಮಹಿಳಾ ಪೇದೆ ಇದರಲ್ಲಿ ಶಾಮೀಲಾಗಿದ್ದು, ಕೂಡಲೇ ಆಕೆಯನ್ನು ಬಂಧಿಸುವಂತೆ ಹೊಸ ನರೀಪುರ ಗ್ರಾಮಸ್ಥರು ಬನ್ನೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಹೊಸ ನರೀಪುರ ಗ್ರಾಮದ ಗುರುಪ್ರಸಾದ್ ಮೃತ ದುರ್ದೈವಿ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಮಧು ಎಂಬಾಕೆ ಮೃತ ಗುರುಪ್ರಸಾದ್ ಅವರನ್ನು 8 ವರ್ಷದಿಂದ ಪ್ರೀತಿಸುತ್ತಿದ್ದರು. ಕಾರಣಾಂತರದಿಂದ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ಕಳೆದ ಭಚಿನುವಾರ ಗುರುಪ್ರಸಾದ್ ನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದರು, ಈ ಬಗ್ಗೆ ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶುಕ್ರವಾರ ತಲಕಾಡು ಸಮೀಪದ ಕಾವೇರಿಪುರ ಸೇತುವೆ ಬಳಿ ಗುರುಪ್ರಸಾದ್ ಶವ ಪತ್ತೆಯಾಗಿದ್ದು ಈತನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಇದರಲ್ಲಿ ಮಹಿಳಾ ಪೊಲೀಸ್ ಪೇದೆ ಮಧು ಕೈವಾಡವಿದೆ. ಕೂಡಲೇ ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಮೃತನ ಪೋಷಕರು ದೂರಿದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಮರಣೋತ್ತರ ಪರೀಕ್ಷೆ ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
0 ಕಾಮೆಂಟ್‌ಗಳು