ಪಾಂಡವಪುರ : ಹಿರಿಯ ರೈತ ಹೋರಾಟಗಾರ ಕೆನ್ನಾಳು ಗ್ರಾಮದ ಪಿ.ನಾಗರಾಜು ಪಾಂಡವಪುರ ತಾಲ್ಲೂಕು ರೈತಸಂಘದ ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾದ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಪಟ್ಟಣದ ರೈತಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಂಡವಪುರ ತಾಲೂಕು ನೂತನ ಪದಾಧಿಕಾರಿಗಳ ಹೆಸರು ಘೊಷಣೆ ಮಾಡಲಾಯಿತು. ತಾಲೂಕು ಉಪಾಧ್ಯಕ್ಷರಾಗಿ ಹಾರೋಹಳ್ಳಿ ಲಕ್ಷ್ಮೇಗೌಡ, ಹರವು ಗೋವಿಂದರಾಜು, ಅರಳಕುಪ್ಪೆ ವೆಂಕಟರಾಮ್, ಬೆಟ್ಟಹಳ್ಳಿ ಮಾಕೇಗೌಡ, ಮಾವಳ್ಳಿ ಪುಟ್ಟೇಗೌಡ, ನುಗ್ಗಹಳ್ಳಿ ರಾಮಕೃಷ್ಣ ನೇಮಕವಾದರು. ಪ್ರಧಾನ ಕಾರ್ಯದರ್ಶಿಯಾಗಿ ಕೆನ್ನಾಳು ವಿಜಯಕುಮಾರ್, ಬೇವಿನಕುಪ್ಪೆ ಯೋಗೇಶ್ ಖಜಾಂಚಿಯಾಗಿ ನೇಮಕವಾದರೆ, ಬೀರಶೆಟ್ಟಹಳ್ಳಿ ಗಿರೀಶ್, ಕಟ್ಟೇರಿ ಕುಮಾರ್, ಬೇಬಿ ನಟರಾಜ್, ಚಿನಕುರಳಿ ಪುಟ್ಟೆಗೌಡ, ಕದಲಗೆರೆ ರಾಮು, ಪಾಂಡವಪುರ ಪಾರ್ಥ, ಹಾರೋಹಳ್ಳಿ ಸೋಮು, ಕ್ಯಾತನಹಳ್ಳಿ ಚಿದಾನಂದ, ಬ್ಯಾಡರಹಳ್ಳಿ ಪ್ರೇಮ್, ಅರಳಕುಪ್ಪೆ ಅಶೋಕ್, ಪಟ್ಟಸೋಮನಹಳ್ಳಿ ರಾಜೇಂದ್ರ, ಬನ್ನಂಗಾಡಿ ಶಂಕರ್, ಬೋಮ್ಮಲಾಪುರ ಉಮೇಶ್, ಸಿಂಗ್ರಿಗೌಡನಕೊಪ್ಪಲು ಬಾಬು, ಡಿಂಕಾ ರಮೇಶ ಅವರನ್ನು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ನೂತನ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಕಾರ್ಯಕರ್ತರು, ಮುಖಂಡರು ಮತ್ತು ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಸಂಘಟನೆ ಮಾಡುವುದರ ಮೂಲಕ ಮುಂಬರುವ ಚುನಾವಣೆಯಲ್ಲಿ ನಮ್ಮ ನಾಯಕರಾದ ದರ್ಶನ ಪುಟ್ಟಣಯ್ಯ ಅವರನ್ನು ಶಾಸಕರನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
0 ಕಾಮೆಂಟ್‌ಗಳು