1.30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು : ಕೃಷ್ಣರಾಜ ಕ್ಷೇತ್ರಕ್ಕೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಇದನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ತಮ್ಮ ಕ್ಷೇತ್ರದ ನಾಲ್ಕು ವಾರ್ಡ್ ಗಳಲ್ಲಿ ಸುಮಾರು ರೂ. 1.30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೋರ್‍ವೆಲ್ ರಹಿತ ಕ್ಷೇತ್ರ : ಕೃಷ್ಣರಾಜ ಕ್ಷೇತ್ರವನ್ನು ಬೋರ್‍ವೆಲ್ ರಹಿತ ಕ್ಷೇತ್ರವನ್ನಾಗಿ ಮಾಡಲಾಗುವುದು. ನಮ್ಮಲ್ಲಿ ಸುಮಾರು 580 ಬೋರ್‍ವೆಲ್‍ಗಳಿದ್ದವು, ಇವುಗಳಲ್ಲಿ 400 ಬೋರ್‍ವೆಲ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದವುಗಳನ್ನು ಸಂಕ್ರಾಂತಿ ಹಬ್ಬದೊಳಗೆ ಸ್ಥಗಿತ ಮಾಡಿ ಎಲ್ಲರಿಗೂ ಶುದ್ಧವಾದ ಕುಡಿಯುವ (ಸರ್ಫೇಸ್) ನೀರು ಒದಗಿಸಲಾಗುತ್ತದೆ.
ಜತೆಗೆ ಕ್ಷೇತ್ರದಲ್ಲಿ 72 ಕಡೆ ಯುಜಿಡಿ ಸಮಸ್ಯೆ ಇತ್ತು. 7 ಕೋಟಿ ರೂ ವೆಚ್ಚದಲ್ಲಿ ಯುಜಿಡಿ ರಿಪೇರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು 10 ವರ್ಷಗಳ ಕಾಲ ನಮ್ಮ ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಇರುವುದಿಲ್ಲ.
ಅಲ್ಲದೇ ಮಳೆ ಬಂದಂತಹ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿಯಲು 100 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಪ್ರಮಾಣದ ಚರಂಡಿಗಳನ್ನು ದುರಸ್ತಿ ಮಾಡಲಾಗಿದೆ. ಇದರಿಂದಾಗಿ ಕಳೆದ 2 ವರ್ಷದಿಂದ 2 ಕಡೆ ಹೊರತುಪಡಿಸಿ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ. ಇನ್ನು ನನ್ನ ಕ್ಷೇತ್ರದಲ್ಲಿ 482 ಕಿಮೀ ರಸ್ತೆ ಇದೆ. ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಜನವರಿ 15 ರೊಳಗೆ ಸೇಫ್ಟಿ ರೋಡ್ ಮಾಡಲಾಗುತ್ತದೆ. ಉಳಿದಂತೆ ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಕೊಡುವುದು ನನ್ನ ಬಹುದೊಡ್ಡ ಕನಸಾಗಿದೆ. ಈಗಾಗಲೇ 2400 ಮನೆಗಳು ನಿರ್ಮಾಣವಾಗುತ್ತಿವೆ. ಒಟ್ಟಾರೆ 12.500 ಮನೆಗಳನ್ನು ನಿರ್ಮಿಸಲಾಗುವುದು ಎಂದರು.
ಇದಲ್ಲದೇ ಫುಟ್‍ಪಾತ್ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು. ಕೃಷ್ಣರಾಜ ಕ್ಷೇತ್ರದ ಮತದಾರರು ಪಕ್ಷಭೇದವಿಲ್ಲದೇ ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ. ಮತದಾರರ ಋಣ ತೀರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಶಾಸಕರ ಅನುದಾನದಡಿ ವಾರ್ಡ್ ಸಂಖ್ಯೆ 57 ರ ಕುವೆಂಪುನಗರದ ಭಾಗದಲ್ಲಿನ "ಏ" ಬ್ಲಾಕ್ ನ ರಸ್ತೆ ಡಾಂಬರಿಕಾರಣ, ವಾರ್ಡ್ ಸಂಖ್ಯೆ 59 ವಿವೇಕನಂದಾನಗರದ ಹುಡ್ಕೋ 807 ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ಸಂಖ್ಯೆ 64 ಅರವಿಂದನಗರ ಭಾಗದ ಶ್ರೀರಾಂಪುರ 3ನೇ ಹಂತ ಭಾಗದಲ್ಲಿನ ರಸ್ತೆ ಡಾಂಬರಿಕಾರಣ, ವಾರ್ಡ್ ಸಂಖ್ಯೆ 65 ಶ್ರೀರಾಂಪುರ ಭಾಗದ ಶಿವಪುರ ಭಾಗದಲ್ಲಿನ ರಸ್ತೆ ಡಾಂಬರಿಕಾರಣಗಳ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿದರು.
ನಗರಪಾಲಿಕೆ ಸದಸ್ಯರಾದ ಸುನಂದ ಪಾಲನೇತ್ರ, ಚಂಪಕ, ಗೀತಾಶ್ರೀ, ಯೋಗಾನಂದ, ಸ್ಥಳೀಯ ಮುಖಂಡರುಗಳಾದ ರವಿ, ಭಾಸ್ಕರ್, ರೋಹಿತ್, ಸದಾನಂದ, ಲೋಕೇಶ್, ಚೇತನ್, ಪದ್ಮ, ಆಶಾ, ಪುಷ್ಪ, ಕಮಲಮ್ಮ, ಇಂದ್ರೇಶ್, ಗಿರಿಧರ್, ಸಂಪತ್, ಪ್ರಸನ್ನ, ಮಾಯ ಜಗದೀಶ್, ರೂಪ, ಮಹಾದೇವಪ್ಪ, ಕೃಷ್ಣಕುಮಾರ್, ಗೋಪಾಲ್, ವಿನಯ್, ನಾಗೇಶ್, ಗೀತಾ, ನಾಗರತ್ನ ಗೌಡ, ಶಿವರಾಜ್, ಪ್ರಪುಲ್ಲಾ, ರಾಮನಾಥ್, ಭಾರತೀಶ್, ವಿ.ಕೆ.ಭಟ್, ವೆಂಕಟಕೃಷ್ಣಭಟ್, ಚಂದ್ರಶೇಖರ್, ಭಾಗವತ್, ವಿಶಾಲಾಕ್ಷಿ, ಪ್ರಕಾಶ್, ಗಿರೀಶ್, ಸತೀಶ್, ಮಂಜು, ಕೃಷ್ಣ, ಸಿದ್ದರಾಜು, ಮಲ್ಲಣ್ಣ, ಪಾಲಾಕ್ಷ, ಜಯಂತಿ, ವೈರಮುಡಿ, ಪಾಪಣ್ಣ, ಮಹಾದೇವಪ್ಪ, ಮಲೇಶ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

0 ಕಾಮೆಂಟ್‌ಗಳು