ಶಾಸಕ ರಾಮದಾಸ್ ಅವರಿಗೆ ಕಿರುಕುಳ ನೀಡುತ್ತಿರುವ ಸಂಸದ ಪ್ರತಾಪ್ ಸಿಂಹ ಅವರೇ ನಿಜವಾದ ಬ್ರಾಹ್ಮಣ ವಿರೋಧಿ : ಕೆ.ಎಸ್.ಶಿವರಾಮು

ಮೈಸೂರು : ಕೃಷ್ಣರಾಜ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡಿಕೊಂಡು ಜನಪ್ರಿಯತೆ ಗಳಿಸಿರುವ ಮೈಸೂರು ಪ್ರಾಂತ್ಯದ ಏಕೈಕ ಬ್ರಾಹ್ಮಣ ಸಮುದಾಯದ ಶಾಸಕ ರಾಮದಾಸ್ ಅವರಿಗೆ ನಿರಂತರವಾಗಿ ಕಿರುಕುಳ ನೀಡಿ, ನಿನ್ನೆಯ ಪ್ರತಿಭಟನೆಯಲ್ಲಿ ಅವರ ಕಾಲಿಗೆ ನಮಸ್ಕಾರ ಮಾಡಿದ ಸಂಸದ ಪ್ರತಾಪ್ ಸಿಂಹ ಅವರೇ ನಿಜವಾದ ಬ್ರಾಹ್ಮಣ ವಿರೋಧಿಯಾಗಿದ್ದಾರೆ. ಇವರನ್ನು ದೂರ ಇಡುವುದು ಬ್ರಾಹ್ಮಣ ಸಮುದಾಯಕ್ಕೆ ಕ್ಷೇಮ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಹೇಳಿದರು. 
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಆರ್.ಕ್ಷೇತ್ರದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರನ್ನು ರಾಮದಾಸ್ ವಿರುದ್ಧ ಎತ್ತಿಕಟ್ಟಿ ಅವರ ರಾಜಕೀಯ ಜೀವನ ಮುಗಿಸಲು ಪ್ರತಾಪ್ ಸಿಂಹ ಹೊಂಚು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಅವರು ಬಸ್ ನಿಲ್ದಾಣದ ಗೋಪುರಗಳಿಗೆ ಗುಂಬಜ್ ಎಂದು ನಾಮಕರಣ ಮಾಡಿ ರಾಮದಾಸ್ ಅವರಿಗೆ ಇಲ್ಲ ಸಲ್ಲದ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.
ಬ್ರಾಹ್ಮಣ ಸಮುದಾಯದ ವಿರುದ್ಧ ತಾವು ಬಾಯಿ ತಪ್ಪಿನಿಂದಾಗಿ ಮಾತನಾಡಿದ್ದಕ್ಕೆ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್ ವಿμÁದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರಿಗೆ ಸಂಬಂಧಿಸಿದ ವಿವಾದ ಕೈಬಿಡುವುದು ಸೂಕ್ತ ಎಂದ ಅವರು, ತಾವೆಂದೂ ವಿಪ್ರರ ವಿರೋಧಿಯಲ್ಲ ವಿಪ್ರರು ಶಾಂತಿ ಪ್ರಿಯರು, ಅವರಲ್ಲಿಯೂ ಬಡವರಿದ್ದಾರೆ. ಆದರೆ ಅವರಲ್ಲಿನ ಉಳ್ಳವರೇ ಇತ್ತೀಚಿನ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿದೆ ಇದರಿಂದ ಬಡ ಬ್ರಾಹ್ಮಣರು ಮತ್ತೇ ಅವಕಾಶ ವಂಚಿತರಾಗುವ ಅಪಾಯವಿದೆ ಎಂದರು.
ಇನ್ನು, ಉಡುಪಿಯಲ್ಲಿ ಪಂಕ್ತಿಭೇದ ಈಗಲೂ ನಡೆಯುತ್ತಿದೆ. ಪ. ಮಲ್ಲೇಶ್ ವಿರುದ್ಧ ಧ್ವನಿಯೆತ್ತುವವರು ಇದನ್ನೇಕೆ ಪ್ರಶ್ನಿಸುವುದಿಲ್ಲ  ಶತ ಶತಮಾನಗಳಿಂದ ಇತರರನ್ನು ಕೆಲವರು ಶೋಷಿಸಿದ್ದು, ಈ ಬಗ್ಗೆ ಅವರು ವಿμÁದ ವ್ಯಕ್ತಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಮಾನತೆ ಕುರಿತು ಮಾತನಾಡುವ ಹಾಗೂ ಅಸಮಾನತೆ ಪ್ರಶ್ನಿಸುವ ಕಾರಣದಿಂದಾಗಿ ಪ.ಮಲ್ಲೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ಸತ್ಯನಾರಾಯಣ, ಮಹೇಂದ್ರ ಕಾಗಿನೆಲೆ, ಎನ್.ಆರ್. ನಾಗೇಶ್, ಸುನಿಲ್ ಹಾಗೂ ರವಿ ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು