ಜಿಟಿ ಜಿಟಿ ಮಳೆಯ ನಡುವೆಯೂ ಹನೂರಿನಲ್ಲಿ ಸಂಭ್ರಮದಿಂದ ಜರುಗಿದ ಕನಕದಾಸರ ಜಯಂತಿ ಕಾರ್ಯಕ್ರಮ

 -ಶಾರುಕ್ ಖಾನ್, ಹನೂರು.

ಹನೂರು : ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮವು ಶುಕ್ರವಾರ ಜಿಟಿ ಜಿಟಿ ಮಳೆಯ ನಡುವೆಯೂ ಸಂಭ್ರಮದಿಂದ ಜರುಗಿತು. ಕನಕದಾಸರ ಭಾವಚಿತ್ರಕ್ಕೆ ಪುμÁ್ಪರ್ಚನೆ ಸಲ್ಲಿಸುವ ಮೂಲಕ ಶಾಸಕ ಆರ್.ನರೇಂದ್ರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ ಬಲ್ಲಿರಾ, ಎಂಬ ಅದ್ಭುತವಾದ ಕೀರ್ತನೆಯನ್ನು ರಚನೆ ಮಾಡಿದಂತಹ ಭಕ್ತ ಶ್ರೇಷ್ಠ ಕನಕದಾಸರು ಅಂದಿನ ಸಮಾಜದಲ್ಲಿ ಇದ್ದಂತಹ ಅಂಕು ಡೊಂಕುಗಳನ್ನು ತಮ್ಮ ಕೀರ್ತನೆಯ ಮೂಲಕ ಇಡೀ ವಿಶ್ವಕ್ಕೆ ಸಾರಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹನೂರು ಆರ್‍ಎಂಸಿ ಆವರಣದಿಂದ ಪ್ರಾರಂಭವಾಗಿ ಮಲೈ ಮಹದೇಶ್ವರ ಮುಖ್ಯ ರಸ್ತೆಯ ಮೂಲಕ ಪಟ್ಟಣ ಪಂಚಾಯಿತಿ ಕಾರ್ಯಾಲಯದ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ವಾದ್ಯ ಮೇಳ, ನಾದ ಸ್ವರಗಳ ಗಮನ ಸೆಳೆಯಿತು.
ತಹಸೀಲ್ದಾರ್ ಆನಂದಯ್ಯ, ತಾಪಂ ಇಒ ಶ್ರೀನಿವಾಸ್, ಪಪಂ ಸಿಒ ಮೂರ್ತಿ, ಶಿರಸ್ತೇದಾರ್ ಶ್ರೀನಿವಾಸ್, ಕಂದಾಯ ನಿರೀಕ್ಷಕ ಮಹದೇವಸ್ವಾಮಿ ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಪಪಂ ಸದಸ್ಯರಾದ ಮಹೇಶ್, ಮುಖಂಡರುಗಳಾದ ಅಜ್ಜೀಪುರ ನಾಗರಾಜು, ಮಹದೇವ, ಕಣ್ಣೂರು ಮಹದೇವಸ್ವಾಮಿ, ಮಂಗಲ ಪುಟ್ಟರಾಜು, ಕೊಪ್ಪಾಳಿ ಮಹದೇವನಾಯ್ಕ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು