ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ನಿಂದ ಹೈನುಗಾರರಿಗೆ ಉಚಿತವಾಗಿ ಹಾಲಿನ ಕ್ಯಾನ್ ವಿತರಣೆ
ನವೆಂಬರ್ 11, 2022
-ಟಿ.ಬಿ.ಸಂತೋಷ್ ಮದ್ದೂರು.
ಮದ್ದೂರು : ಕೆಪಿಸಿಸಿ ಸದಸ್ಯ ಗುರುಚರಣ್ ಶುಕ್ರವಾರ ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹೈನುಗಾನುಗಾರರಿಗೆ ಉಚಿತವಾಗಿ ಹಾಲಿನ ಕ್ಯಾನ್ ಗಳನ್ನು ವಿತರಣೆ ಮಾಡಿದರು. ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಲ್ಲನಕುಪ್ಪೆ, ಗೊಲ್ಲರ ದೊಡ್ಡಿ, ದುಂಡನಹಳ್ಳಿ, ಚಾಮಲಾಪುರ ದೊಡ್ಡಿ, ಛತ್ರಲಿಂಗನ ದೊಡ್ಡಿ, ಬೆಟ್ಟದಾಸನ ದೊಡ್ಡಿ, ಕುಂದನಕುಪ್ಪೆ ಹಾಗೂ ಅರಕನಹಳ್ಳಿಯ ಡೈರಿಗಳಿಗೆ ಭೇಟಿ ಮಾಡಿ ಹಾಲು ಉತ್ಪಾದನೆ ಮಾಡುವ ರೈತರಿಗೆ ಕ್ಯಾನ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮದ್ದೂರು ತಾಲ್ಲೂಕಿನಾದ್ಯಂತ ಹಾಲು ಉತ್ಪಾದಕರಿಗೆ ಅನುಕೂಲವಾಗಲು ಉಚಿತವಾಗಿ ಹಾಲಿನ ಕ್ಯಾನ್ ವಿತರಣೆ ಮಾಡಲಾಗಿದೆ ಎಂದರು. ಮುಖಂಡರಾದ ಕದಲೂರು ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಗೌಡ, ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ್ ಪಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಾಘವ ಪಿ, ನಿರ್ದೇಶಕರಾದ ಶಂಕರ ಲಿಂಗಯ್ಯ, ಮುಖಂಡರಾದ ಕೆ.ಟಿ.ರಾಜಣ್ಣ, ತಾಪಂ ಮಾಜಿ ಸದಸ್ಯರಾದ ಬೊಮ್ಮೆಗೌಡ, ಪುರಸಭಾ ಮಾಜಿ ಅಧ್ಯಕ್ಷ ಅಮರ ಬಾಬು, ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ, ಮಲ್ಲನಕುಪ್ಪೆ ರಮೇಶ್, ಪ್ರಮೋದ್, ಮಹೇಶ್, ನಿತ್ಯಾ, ರಾಜೇಂದ್ರ, ಕುಮಾರ, ರವಿ, ಬೋರಯ್ಯ, ತಿಮ್ಮಪ್ಪ ,ಬಿಳಿಯಪ್ಪ, ಪುನೀತ್, ಪ್ರಶಾಂತ್ ಹಾಗೂ ಯೋಗೇಶ್ ಕುಮಾರ್ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು