ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣಗಳನ್ನು ಕದ್ದ ಅರ್ಚಕನ ಬಂಧನ
ನವೆಂಬರ್ 05, 2022
ಕಾಸರಗೋಡು : ದೇವರ ವಿಗ್ರಹದಲ್ಲಿದ್ದ ಚಿನ್ನಾಭರಣಗಳನ್ನು ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚಕನೊಬ್ಬನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ತಿರುವನಂತಪುರ ಮೂಲದ ದೀಪಕ್ ನಂಬೂದಿರಿ ಚಿನ್ನಾಭರಣ ಕದ್ದ ಆರೋಪಿ ಎಂದು ಗುರುತಿಸಲಾಗಿದೆ. ದೀಪಕ್ ಮಾರಾಟ ಮಾಡಿದ್ದ ದೇವರ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ಅಕ್ಟೋಬರ್ 27 ರಿಂದ ದೀಪಕ್ ನನ್ನು ಪೂಜೆ ಮಾಡಲು ನೇಮಿಸಲಾಗಿತ್ತು. ಅ.29 ರಂದು ಸಂಜೆ ಪೂಜೆಯ ಬಳಿಕ ಹೊಸಂಗಡಿ ಪೇಟೆಗೆ ಹೋಗಿ ಬರುವುದಾಗಿ ಕಾವಲುಗಾರನಿಗೆ ಹೇಳಿ ತೆರಳಿದ್ದ ದೀಪಕ್ ನಂಬೂದಿರಿ ಬಳಿಕ ಮರಳಿ ಬಂದಿಲ್ಲ. ದೇವಸ್ಥಾನದ ಮೊಕ್ತೇಸರ ಕರೆ ಮಾಡಿದರೂ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬಳಿಕ ಪೂಜೆ ಮಾಡಲು ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ನಕಲಿ ಚಿನ್ನಾಭರಣ ಅಳವಡಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ದೇವಸ್ಥಾನ ಸಮಿತಿಯವರು ದೂರು ನೀಡಿದ್ದರು.
0 ಕಾಮೆಂಟ್‌ಗಳು