ಮೈಸೂರಿನಲ್ಲಿ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ 12 ನೇ ಸಮಾವೇಶ

ಮೈಸೂರು : ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟದ 12 ನೇ ಸಮಾವೇಶ ಇದೇ ನ.6 ರಿಂದ 8 ರವರೆಗೆ ಜೆಎಲ್‍ಬಿ ರಸ್ತೆಯ ಹೊಟೇಲ್ ಗುರು ರೆಸಿಡೆನ್ಸಿ ಹಿಂಭಾಗದ ಗೋವಿಂದರಾವ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಪಾಧ್ಯಕ್ಷ ಎ.ಶ್ರೀನಿವಾಸ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶದಲ್ಲಿ ದೇಶದಾದ್ಯಂತದಿಂದ ಒಕ್ಕೂಟದ ಮುಖಂಡರು ಹಾಗೂ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ಅಂಚೆ ಇಲಾಖೆ ಖಾಸಗೀಕರಣ ವಿರೋಧಿಸಿ, ಹೊಸ ಪಿಂಚಣಿ ಯೋಜನೆ ಹಿಂದಕ್ಕೆ ಪಡೆಯಬೇಕು, ಮೂಲ ವೇತನದಿಂದ ಶೆ. 10 ರಷ್ಟು ಕಡಿತಗೊಳಿಸಿ μÉೀರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ನಂತರ ಬಿಡಿಗಾಸಿನ ನಿವೃತ್ತ ವೇತನ ನೀಡುವ ವ್ಯವಸ್ಥೆ ಕೈಬಿಡಬೇಕು, ಎಂಟನೇ ವೇತನ ಆಯೋಗ ರಚಿಸಬೇಕು, ಗ್ರಾಮೀಣ ಅಂಚೆ ಸೇವಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಎಲ್ಲ ವರ್ಗದ ನೌಕರರಿಗೂ ಸೇವಾವಧಿಯಲ್ಲಿ ಬಡ್ತಿ ನೀಡಬೇಕು, ಎಲ್ಲ ದಿನಗೂಲಿ ಕಾರ್ಮಿಕರ ಸೇವೆ ಕಾಯಂಗೊಳಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದೆಂದರು.
ಒಕ್ಕೂಟದ ಇನ್ನಿತರ ಪದಾಧಿಕಾರಿಗಳಾದ ಆರ್.ಎನ್. ಪರಾಶರ್, ಜನಾರ್ಧನ್ ಮಜುಂದಾರ್, ಗಿರಿರಾಜ್ ಸಿಂಗ್, ಧಮೇರ್ಂದ್ರ ಜೈನ್, ಇನ್ನಿತರರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು