ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕುಮಾರ್ ದೊರೆ ಅವಿರೋಧ ಆಯ್ಕೆ

ಪತ್ರಕರ್ತರಿಗೆ 4 ಲಕ್ಷ ರೂ. ವಿಮೆ, ಅಪಘಾತದಲ್ಲಿ ಗಾಯಗೊಂಡರೆ 70 ಸಾವಿರ ಆಸ್ಪತ್ರೆ ವೆಚ್ಚ

ಹನೂರು : ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಕುಮಾರ್ ದೊರೆ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಮೈರಾಡ ಕಚೇರಿಯಲ್ಲಿ ನಡೆದ ಸಮಾನ ಮನಸ್ಕ ಪತ್ರಕರ್ತರ ಸಭೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ಸ್ಥಾಪನೆಗೆ ಶನಿವಾರ ಚಾಲನೆ ನೀಡಲಾಯಿತು. ಈ ವೇಳೆ ನೂತನ ಸಂಘದ ದ್ಯೆಯೋದ್ದೇಶಗಳು ಹಾಗೂ ಚಟುವಟಿಕೆಗಳ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯದ್ಯಕ್ಷ ಮುರುಗೇಶ್ ಶಿವಪೂಜೆ ಅವರ ಸೂಚನೆಯ ಮೇರೆಗೆ ಜಿಲ್ಲಾ ಸಂಚಾಲಕರು ಹಾಗೂ ತಾಲ್ಲೂಕು ಗೌರವ ಅದ್ಯಕ್ಷರಾದ ಸಿ.ಬಂಗಾರಪ್ಪ ಸವಿಸ್ತಾರವಾಗಿ ವಿವರಿಸಿದರು.
ಪ್ರಸ್ತುತ ನಮ್ಮ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡೆದಿರುತ್ತದೆ. ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ. ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇದೆ ಎಂದು ವಿವರಿಸಿದರು.
ಗ್ರಾಮೀಣ ಪತ್ರಕರ್ತರು ಸಭೆ ಸಮಾರಂಭಗಳೆಂದು ಓಡಾಡುವಾಗ ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ. ಜತೆಗೆ ಸಮಾಜ ಕಂಟಕರಿಂದ ಹಲ್ಲೆಗೂ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ 4 ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ. ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 4 ಲಕ್ಷ ರೂ. ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ 70 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ಸಹ ನೀಡಲಾಗುತ್ತಿದೆ. ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ಮತ್ತು ರೈಲು ಪಾಸ್ ಸೌಲಭ್ಯಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಸಹ ನಮ್ಮ ಸಂಘದ ಸದಸ್ಯರಿಗೆ ಸಿಗುವ ಸಾಧ್ಯತೆ ಇದೆ. 
ಈ ಸಂದರ್ಭದಲ್ಲಿ ಒಮ್ಮತದ ಮೇರೆಗೆ ಹನೂರು ತಾಲ್ಲೂಕು ಘಟಕದ ಉಪಾದ್ಯಕ್ಷಾರಾಗಿ ಸತೀಶ್, ಕಾರ್ಯದರ್ಶಿಯಾಗಿ ಅಭಿಲಾμï ಗೌಡ, ಖಜಾಂಚಿಯಾಗಿ ಎಲ್.ಚೇತನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪತ್ರಕರ್ತರಾದ ಶಾರುಖ್ ಖಾನ್, ಚೇತನ್, ರವಿ, ಪ್ರಸನ್ನ, ಸತೀಶ್, ಬಸವರಾಜು, ಉಸ್ಮಾನ್, ಅಜಿತ್ ವೀಲಿಯಮ್, ನಾಗೇಂದ್ರ ಸೇರಿದಂತೆ ಇತರರು ಹಾಜರಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು