ಓದು, ಬರವಣಿಗೆಯ ಹುಚ್ಚಿದ್ದವರು ಮಾತ್ರ ಒಳ್ಳೆಯ ಪತ್ರಕರ್ತರಾಗಬಹುದು : ಶ್ರೀಶ

ಮೈಸೂರು : ಓದು ಮತ್ತು ಬರವಣಿಗೆಯ ಹುಚ್ಚು ಹಿಡಿದವರು ಮಾತ್ರ ಒಳ್ಳೆಯ ಪತ್ರಕರ್ತನಾಗಬಲ್ಲ ಎಂದು ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ ಹೇಳಿದರು.
ಜಿಲ್ಲಾ ಪತ್ರಕರ್ತರ ಭವವನದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜ್ ರಚಿಸಿರುವ ಸುಧರ್ಮಾ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 
ದುಡ್ಡು, ಬಂಗಲೆ ಮತ್ತು ಅಧಿಕಾರಗಳ ಬಗ್ಗೆ ವ್ಯಾಮೋಹ ಇರುವವರು ಪತ್ರಕರ್ತರಾಗಬಾರದು. ಅವರು ಬೇರೆ ಮಾರ್ಗ ನೊಡಿಕೊಳ್ಳುವುದು ಸೂಕ್ತ. ಪತ್ರಕರ್ತನಿಗೆ ಸಮಾಜದ ಎಲ್ಲಾ ಸ್ತರಗಳ ಬಗ್ಗೆ ಅರಿವಿರಬೇಕು. 
ರಾಜಕಾರಣದಲ್ಲಿ ಹಾಸುಹೊಕ್ಕಾಗಿರುವ ಜಾತಿಯತೆ ಮತ್ತು ಭ್ರಷ್ಟಾಚಾರ ಇಂದು ಪತ್ರಿಕೋದ್ಯಮವನ್ನು ವಕ್ಕರಿಸಿದೆ. ಈ ಎರಡು ಸಂಗತಿಗಳು ಪತ್ರಕೋದ್ಯಮದ ನಿಜವಾದ ಶತ್ರುಗಳು. ಪತ್ರಿಕಾ ವೃತ್ತಿ ಇರುವುದು ಸಮಾಜ ಸೇವೆ ಮಾಡಲಿಕ್ಕೆ ಹೊರತು ಹಣ ಮಾಡುವುದಕ್ಕಲ್ಲ ಎಂದು ಮಾರ್ಮಿಕವಾಗಿ ನುಡಿದರು
ಸುಧರ್ಮಾ ಕೇವಲ ಪತ್ರಕೆಯಲ್ಲ. ಅದು ನಮ್ಮ ಸಂಸ್ಕøತದ ಪ್ರತೀಕ. ಇಂತಹ ಪತ್ರಿಕೆ ಮೈಸೂರಿನ ವರದರಾಜು ಅಯ್ಯರ್ ಅವರು ಮುನ್ನಡುತ್ತಿದ್ದರು ಎಂಬುದು ಸಂತೋಷದ ವಿಚಾರ. ಮೈಸೂರು ಬ್ರಿಟಿಷರ ಕಾಲದಿಂದಲೂ ಉತ್ತಮ ಹೆಸರು ಪಡೆದುಕೊಂಡಿದೆ. ಇಲ್ಲಿನ ರಾಜರು ಮತ್ತು ದಿವಾನರು ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಪತ್ರಕರ್ತರಿಗೆ ತಾವು ಕೆಲಸ ಮಾಡುವ ಸ್ಥಳದ ಬಗ್ಗೆ ಕನಿಷ್ಠ ಇತಿಹಾಸ ತಿಳಿದುಕೊಳ್ಳಬೇಕು. ಆಗ ಮಾತ್ರ ನೀವು ಅಲ್ಲಿನ ಸಮಸ್ಯೆಳಿಗೆ ಸ್ಪಂದಿಸಲು ಸಾಧ್ಯ. ಇಂದಿನ ಯುವ ಪೀಳಿಗೆಗೆ ಇತಿಹಾಸ ತಿಳಿದುಕೊಳ್ಳುವ ವ್ಯವದಾನವೇ ಇಲ್ಲ ಎಂದು ಹೇಳಿದರು.
ಕರ್ನಾಟಕ ಮಾದ್ಯಮ ಆಕಾಡೆಮಿ ಸದಸ್ಯ ಪತ್ರಕರ್ತ ಕಂ.ಕ. ಮೂರ್ತಿ ಮಾತನಾಡಿ, ಇಂದಿನ ಡಿಜೆಟೆಲ್ ದಿನಗಳಲ್ಲಿಯೂ ಪತ್ರಿಕೆಗಳು ತಮ್ಮ ಸತ್ವವನ್ನು ಕಾಪಾಡಿಕೊಂಡು, ಡಿಜಿಟಲ್ ಯುಗದೊಂದಿಗೆ ಹೆಜ್ಜೆ ಹಾಕುತ್ತಿವೆ. ಈ ಸಾಲಿನಲ್ಲಿ ಸುಧರ್ಮಾ ಪತ್ರಿಕೆ ನಿಲ್ಲುತ್ತದೆ. ನಾವು ಅನೇಕ ಪುಸ್ತಕಗಳನ್ನು ಓದುತ್ತೆವೆ. ಅವುಗಳಲ್ಲಿ ಕೆಲವು ಮಾತ್ರ ನಮ್ಮನ್ನು ಹೆಚ್ಚು ಹೆಚ್ಚು ಕಾಡುತ್ತವೆ. ಇಂತಹ ಪುಸ್ತಕಗಳ ಪೈಕಿಯಲ್ಲಿ ಸುಧರ್ಮಾ ಪುಸ್ತಕವು ಒಂದಾಗಿದೆ. ಒಬ್ಬ ಪತ್ರಕರ್ತ ಕೇವಲ ತನ್ನನು ಸುದ್ದಿ ಬರೆಯುವುದಕ್ಕೆ ಸೀಮಿತಗೊಳಿಸಬಾರದು. ಪ್ರಪಂಚದ ಸೂಕ್ಷ್ಮ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.
ಪತ್ರಿಕೋದ್ಯಮ ವೃತ್ತಿಯಲ್ಲಿ ಅದೊಂದು ವಿಶಿಷ್ಟ ಸೇವೆ. ಪತ್ರಕರ್ತರು ಮಾತ್ರ ಸಮಾಜದ ಎಲ್ಲಾ ರೀತಿಯ ಸಾಮಾಜಿಕ ವೈರುಧ್ಯಗಳ ಜೊತೆ ಸಂಘರ್ಷ ಮಾಡಬಲ್ಲರು. ಯಾವುದೇ ಸಿದ್ಧಾಂತಕ್ಕೂ ನೈಜ ವಿಷಯಗಳನ್ನು ಬಿತ್ತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ಕರಾಳ ದಿನಗಳು ಹೇಗೆ ಪತ್ರಕೋದ್ಯಮದ ಮೇಲೆ ಪ್ರಭಾವ ಬೀರಿತ್ತು ಎಂಬುದು ಅನೇಕರಿಗೆ ಗೊತ್ತಿದೆ. ಅಂದಿನ ತುರ್ತು ಪರಿಸ್ಥಿತಿಯು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಮಾಡಿತ್ತು. ಇಂತಹ ಸಂದರ್ಭದಲ್ಲಿಯೂ ಪತ್ರಿಕೋದ್ಯಮ ತನ್ನ ಪತ್ರಿಕಾ ಧರ್ಮವನ್ನು ಪಾಲಿಸಿಕೊಡು ಬಂದಿತು ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು ಪತ್ರಕರ್ತರನ್ನು ತಲೆ ತಗ್ಗಿಸುವಂತೆ ಮಾಡಿತು. ಕೆಲವು ಪತ್ರಕರ್ತರು ತಮಗೆ ಬಂದಿದ್ದ ಉಡುಗೊರೆಗಳನ್ನು ಹಿಂದಿರುಗಿಸುವ ಮೂಲಕ ಪತ್ರಿಕೋದ್ಯಮದ ಘನೆತೆಯನ್ನು ಕಾಪಾಡಿದಿರು. ಇಂತಹ ಘಟನೆಗಳು ಮತ್ತೆ ಮರುಕಳಿಸುವಂತಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಸುಧರ್ಮಾ ಪತ್ರಿಕೆಯ ಸಂಪಾದಕಿ ಜಯಲಕ್ಷ್ಮಿ, ಡಾ.ಕೂಡ್ಲಿ ಗುರುರಾಜ್, ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹಾಜರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು