ಕೆ.ಎಂ.ದೊಡ್ಡಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ
ನವೆಂಬರ್ 11, 2022
-ಟಿ.ಬಿ.ಸಂತೋಷ್ ಮದ್ದೂರು.
ಮದ್ದೂರು : ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ದೇವಾಲಯದ ಉತ್ಸವ ಮೂರ್ತಿಗಳನ್ನು ಅರಳಿಕಟ್ಟೆ ಬಳಿಗೆ ಕರೆತಂದು ವಿವಿಧ ಪುಷ್ಪಗಳಿಂದ ಅಲಂಕೃತ ಗೊಳಿಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ಕರೆತರಲಾಯಿತು . ನಂತರ ದೇವಾಲಯದ ಸುತ್ತಲು 131 ತಾಂಬೂಲ ತಟ್ಟೆಗಳೊಡನೆ ಪ್ರದಕ್ಷಿಣೆ ಹಾಕಿಸಿ ಪದ್ಮಾವತಿ ಮಂಟಪಕ್ಕೆ ಕರೆತರಲಾಯಿತು. ಪದ್ಮಾವತಿ ಮಂಟಪದಲ್ಲಿ ಶ್ರೀನಿವಾಸ, ಪದ್ಮಾವತಿ, ಲಕ್ಷ್ಮೀದೇವಿಯರೊಡನೆ ಕಲ್ಯಾಣ ನೆರವೇರಿಸಲಾಯಿತು. ಮೇಲುಕೋಟೆಯ ದೇವಾಲಯದ ಅರ್ಚಕರಾದ ಡಾ.ಸೆಲ್ವಪಿಳ್ಳೆ ಅಯ್ಯಂಗಾರ್ ನೇತೃತ್ವದಲ್ಲಿ ಕಲ್ಯಾಣ ಮಹೋತ್ಸವ ಅದ್ದೂರಿಯಾಗಿ ಜರುಗಿತು. ನಂತರ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪೂಜಾ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ವೆಂಕಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ವೆಂಕಟೇಗೌಡ, ಕಾರ್ಯಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿಗಳಾದ ದೇವರಹಳ್ಳಿ ವೆಂಕಟೇಶ್, ಗುಡಿಗೆರೆ ಬಸವರಾಜ್, ನಾಗಪ್ಪ, ಕೆಂಚೇಗೌಡರ ಶ್ರೀನಿವಾಸ್, ಶ್ರೀನಿವಾಸ್ ಸೇರಿದಂತೆ ಮತ್ತಿತರರು ವಹಿಸಿದ್ದರು.
0 ಕಾಮೆಂಟ್‌ಗಳು