ಕಾಡನಪುರದೊಡ್ಡಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಲೋಕಾರ್ಪಣೆ
ನವೆಂಬರ್ 22, 2022
ಮದ್ದೂರು : ತಾಲೂಕಿನ ಕಾಡನಪುರದೊಡ್ಡಿ (ಕೆ.ಪಿ.ದೊಡ್ಡಿ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಾಂಜನೇಯಸ್ವಾಮಿ ಸಹಿತ ಶ್ರೀ ಅದಿತ್ಯಾದಿ ನವಗ್ರಹ ದೇವತಾ ಪ್ರತಿμÁ್ಠನದ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಬೆಳ್ಳಿಗೆ 10.30 ರ ವೇಳೆಗೆ ಪೂರ್ಣಕುಂಭದ ಸಹಿತ ಹೂ ಹೊಂಬಾಳೆಯೊಂದಿಗೆ ಶ್ರೀ ಕಾರ್ಕಳ್ಳಿ ಬಸವೇಶ್ವರ, ಚಿಕ್ಕರಸಿನಕೆರೆ ಕಾಲಭೈರವೇಶ್ವರ, ಶ್ರೀ ಸಣ್ಣಕ್ಕಿರಾಯ ಶ್ರೀ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಬಸಪ್ಪಗಳ ಜೊತೆ ಶ್ರೀ ಮಣಿಗೆರೆ ಕಬ್ಬಾಳಮ್ಮ ,ಶ್ರೀ ಮಾರಮ್ಮ, ಶ್ರೀ ಪಟ್ಟಲದಮ್ಮ ಶ್ರೀ ಕೆಂಪಮ್ಮ ದೇವರುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿ ಶಾಸ್ತ್ರೋಕ್ಷವಾಗಿ ಶ್ರೀ ವೀರಾಂಜನೇಯ ಸ್ವಾಮಿ ಮೂರ್ತಿ ಹಾಗೂ ಅಧಿತ್ಯಾದಿ ನವಗ್ರಹ ದೇವತಗಳ ಮೂರ್ತಿಯನ್ನು ಪ್ರತಿμÁ್ಠಪನೆ ಮಾಡಲಾಯಿತು. ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶ್ರೀ ವೀರಾಂಜನೇಯ ಸ್ವಾಮಿಯ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಗ್ರಾಮಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ದೇವಸ್ಥಾನಗಳು ನಿರ್ಮಾಣವಾಗಬೇಕು. ದೇವಾಲಯಗಳ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಹಾಗೂ ಭಕ್ತಿ ಪೂರ್ವಕ ವಾತಾವರಣಗಳು ನಿರ್ಮಾಣವಾಗುವುದರ ಜೊತೆ ಸಮಾಜದಲ್ಲಿ ದೈವತ್ವ ನಂಬಿಕೆಗಳನ್ನು ವೃದ್ಧಿಸುತ್ತದೆ. ಶ್ರೀ ಆಂಜನೇಯ ಸ್ವಾಮಿಯವರು ಭಕ್ತಿಗೆ ಹಾಗೂ ಶಕ್ತಿಗೆ ಹೆಸರಾಗಿರುವ ದೇವರಾಗಿದ್ದಾರೆ ಅವರ ದೇವಸ್ಥಾನ ನಿರ್ಮಾಣದಿಂದ ಗ್ರಾಮ ಶಾಂತಿ ನೆಲೆಸಿ ಗ್ರಾಮ ಪ್ರಗತಿ ಕಾಣಲಿ ಎಂದರು. ಕೊಮ್ಮೆರಹಳ್ಳಿ ಶಾಖಾಮಠದ ಶ್ರೀ ಪುರೋμÉೂೀತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ, ಮನ್ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ವಿನಯ್ ರಾಮಕೃಷ್ಣ, ಕರಡಕೆರೆ ಹನುಮಂತು, ಮನು, ದಾಬಾ ಕಿಟ್ಟಿ ಶ್ರೀ ವೀರಾಂಜೆನೇಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನಿಲ್, ಸಿದ್ದರಾಜು, ಆರ್ಕೆಶ್, ಸುಂದರ್, ಕೆ.ಎಲ್ ಪುಟ್ಟಲಿಂಗಯ್ಯ ಹಾಗೂ ಕೆ.ಪಿ.ದೊಡ್ಡಿ, ಮಣಿಗೆರೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು