6 ಕೋಟಿ ವೆಚ್ಚದಲ್ಲಿ ಬಸವನಗುಡಿಯಿಂದ ಟಿಬೇಟಿಯನ್ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಭೂಮಿಪೂಜೆ

ವರದಿ-ಶಾರುಕ್ ಖಾನ್, ಹನೂರು

ಹನೂರು : ಸುಮಾರು 6 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಬಸವನಗುಡಿಯಿಂದ ಟಿಬೇಟಿಯನ್ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಅವರು ಬುಧವಾರ ಭೂಮಿ ಪೂಜೆ ಸಲ್ಲಿಸಿದರು. 

ತಾಲೂಕಿನ ಬಸವನಗುಡಿ ಸಮೀಪ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ತಾಲ್ಲೂಕಿನ ಸುತ್ತಮುತ್ತಲ  ಟಿಬೆಟಿಯನ್ನರು ಸೌಹಾರ್ಧಯುತವಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ. ಟಿಬೆಟನ್ನರ ಅಧಿಕಾರಿಗಳು ಸಹ ಹಲವಾರು ಬಾರಿ ನನ್ನ ಬಳಿ ಇಲ್ಲಿನ ಮೂಲಭೂತ ಸೌಕರ್ಯಗಳು, ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ಅದರಂತೆ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದು ಬಸವನಗುಡಿಯಿಂದ ಟಿಬೇಟಿಯನ್ನರ  ಕಾಲೋನಿಗೆ ಸುಮಾರು 6 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತಿದ್ದು  ಈ ಕಾಮಗಾರಿ ಆದಷ್ಟು ಬೇಗ ಪೂರ್ಣ ಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ತಿಳಿಸಿದರು 

ಟಿಬೇಟಿಯನ್ನರು ಇಲ್ಲಿ ನೆಲೆ ನಿಂತ ಮೇಲೆಯೇ ನಮ್ಮ ಜಿಲ್ಲೆಯ ಜನತೆ ಮುಸುಕಿನ ಜೋಳ ಬೆಳೆಯನ್ನು ಬೆಳೆಯಲು ಕಲಿತಿದ್ದು  ಇಂದು ಜಿಲ್ಲೆಯಲ್ಲಿ ಯಥೇಚ್ಛವಾಗಿ ಮುಸುಕಿನ ಜೋಳ  ಬೆಳೆಯುತ್ತಿದ್ದೇವೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು