ಭಾರತಿ ನಗರ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಿ, ಕುಂದು ಕೊರತೆ ಆಲಿಸಿದ ಶಾಸಕ ಡಿ.ಸಿ ತಮ್ಮಣ್ಣ
ನವೆಂಬರ್ 02, 2022
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ಶಾಸಕ ಡಿ.ಸಿ.ತಮ್ಮಣ್ಣ ಇಂದು ತಾಲೂಕಿನ ಭಾರತಿನಗರ ಜಿಪಂ ವ್ಯಾಪ್ತಿಯ ಹಾಗಲಹಳ್ಳಿ, ಚಂದುಪೂರ, ಎಸ್‍ಐ ಹೊನ್ನಲಗೆರೆ, ಹೆಚ್.ಹೊಸೂರು, ಹೆಚ್.ಹೊಸಹಳ್ಳಿ ಹೊನ್ನಾಯಕನಹಳ್ಳಿ ಹಾಗೂ ಪುಟ್ಟೇಗೌಡನದೊಡ್ಡಿ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ನಂತರ ಅವರು ಮಾತನಾಡಿ, ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಪೂರಕವಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಶಾಸಕರ ಅನುದಾನದಲ್ಲಿ ರಸ್ತೆಗಳ ನಿರ್ಮಾಣ, ಚರಂಡಿಗಳ ಅಭಿವೃದ್ಧಿ, ನಾಲೆಗಳ ಆಧುನಿಕರಣ, ಏತ ನೀರಾವರಿ ಯೋಜನೆಗಳ ಮೂಲಕ ತಾಲೋಕಿನಾದ್ಯಂತ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ, ಜತೆಗೆ ವಿದ್ಯುತ್ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಶಾಲಾ ಕಾಲೇಜುಗಳ ನಿರ್ಮಾಣ, ಆಸ್ಪತ್ರೆಗಳಿಗೆ ವಿಶೇಷ ಅನುದಾನ ತಂದು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದೇವೆ ಎಂದರು ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಗೌಡ, ಮುಖಂಡರಾದ ಗುರುದೇವರಹಳ್ಳಿ ಅರವಿಂದ್, ಕೆ.ಟಿ.ಸುರೇಶ್, ಅಣ್ಣುರು ವಿನೋದ್, ಯೋಗೇಂದ್ರ, ಹೂತಗರೆ ಗ್ರಾಪಂ ಅಧ್ಯಕ್ಷ ರವಿಕುಮಾರ್, ಗುಡಿಗೆರೆ ಬಸವರಾಜ, ಮಹೇಂದ್ರ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು