ಶ್ರದ್ಧಾಭಕ್ತಿಯಿಂದ ಜರುಗಿದ ಕ್ರೈಸ್ತ ಮೃತ ವಿಶ್ವಾಸಿಗಳ ಪುಣ್ಯ ಸ್ಮರಣಾ ದಿನ
ನವೆಂಬರ್ 02, 2022
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಹನೂರು ಪಟ್ಟಣ ಸೇರಿದಂತೆ ಮಾರ್ಟಳ್ಳಿ ಸಂದಯ್ಯನ ಪಾಳ್ಯ, ತೋಮಿಯಾರ್ ಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಾಸವಿರುವ ಕ್ರೈಸ್ತ ಬಾಂಧವರು ತಮ್ಮ ಪೂರ್ವಿಕರ ಪುಣ್ಯ ಸ್ಮರಣಾ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಸ್ಥಳೀಯ ಚರ್ಚ್‍ಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಇಂದು ಬೆಳಿಗ್ಗೆ ವಿಶೇಷ ಪೂಜೆಗಳು ಜರುಗಿದವು. ಸಂಜೆ ವೇಳೆಗೆ ಸಮಾಧಿ ತೋಟಕ್ಕೆ ತೆರಳಿದ ನೂರಾರು ಕ್ರೈಸ್ತ ಬಾಂಧವರು ಮೃತ ಸಂಬಂಧಿಕರ ಸಮಾಧಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹೂಮಾಲೆ ಅರ್ಪಿಸಿ ತಮ್ಮ ಪೂರ್ವಿಕರ ಆತ್ಮಕ್ಕೆ ಶಾಂತಿ ಪ್ರಾಪ್ತಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.
0 ಕಾಮೆಂಟ್‌ಗಳು