ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಕ್ರೀಡೆಯೂ ಮುಖ್ಯ : ಫಾದರ್ ಮದಲೇ ಮುತ್ತು
ನವೆಂಬರ್ 10, 2022
-ಶಾರುಕ್ ಖಾನ್, ಹನೂರು
ಹನೂರು : ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕ್ರೀಡೆಯೂ ಬಹಳ ಮುಖ್ಯ ಎಂದು ಮೈಸೂರಿನ ಫಾದರ್ ಮದಲೇ ಮುತ್ತು ತಿಳಿಸಿದರು. ಗುರುವಾರ ಹನೂರು ಪಟ್ಟಣದ ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಮೈಸೂರು ಧರ್ಮ ಕ್ಷೇತ್ರ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಮಟ್ಟದ ಶಾಲಾ ಹಾಗೂ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಉಂಟಾಗುವ ಸೋಲು ಮತ್ತು ಗೆಲುವುಗಳು ಮುಂದೆ ವಿದ್ಯಾರ್ಥಿಗಳ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಇವು ಸಹಕಾರಿಯಾ ಗುತ್ತವೆ ಎಂದರು. ಕ್ರಿಸ್ತರಾಜ ವಿದ್ಯಾಸಂಸ್ಥೆಯ ಫಾದರ್ ರೋಷನ್ ಭಾಬು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ನಾಗವಳ್ಳಿ, ಮಾದಾಪುರ, ಜಾಗೇರಿ, ಕೊಳ್ಳೇಗಾಲ, ಕಾಮಗೆರೆ, ತೋಮಿಯರಪಾಳ್ಯ, ಮಾರ್ಟಳ್ಳಿ, ಕೌದಳ್ಳಿ, ಸಂದನಪಾಳ್ಯ, ಹನೂರು ಸೇರಿದಂತೆ ಎಮ್‍ಡಿಇಎಸ್ ವಿದ್ಯಾಸಂಸ್ಥೆಗಳ ಬಾಲಕರ ಹಾಗೂ ಬಾಲಕೀಯರ 32 ತಂಡಗಳು ಭಾಗವಹಿಸಿದ್ದವು. ಫಾದರ್ ಸಬಾಸ್ಟೀಯನ್, ಫಾದರ್ ಟೆನ್ನಿ ಕುರಿಯನ್, ಫಾದರ್ ಸೂಸೈ ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು