ಹನೂರು : ಶ್ರೀ ಬೆಟ್ಟಳ್ಳಿ ಮಾರಮ್ಮನವರ ನೂತನ ಲೋಹದ ಪಲ್ಲಕ್ಕಿ ಲೋಕಾರ್ಪಣೆ
ನವೆಂಬರ್ 10, 2022
-ಶಾರುಕ್ ಖಾನ್, ಹನೂರು
ಹನೂರು : ಪಟ್ಟಣದ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮನವರ ನೂತನ ಲೋಹದ ಪಲ್ಲಕ್ಕಿ ಉತ್ಸವ ಲೋಕಾರ್ಪಣೆ ಹಾಗೂ ಪೂಜಾ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದವು. ಶ್ರೀ ಮಹದೇಶ್ವರ ದೇವಸ್ಥಾನ ಹಾಗೂ ಜೋಡಿ ಕೆರೆ ಅಶ್ವತ್ಥ ಮರದ ಬಳಿ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಿಯ ನೂತನ ಪಲ್ಲಕ್ಕಿ ಉತ್ಸವಕ್ಕೆ ಗ್ರಾಮದ ಅಧಿ ದೇವತೆಯ ಭಾವಚಿತ್ರವನ್ನು ಪ್ರತಿμÁ್ಠಪಿಸಿ ತ್ರಿಶೂಲ, ಕಳಸ, ಛತ್ರಿ ಚಾಮರರೂಢ ಪಲ್ಲಕ್ಕಿ ಉತ್ಸವಕ್ಕೆ ಶ್ರೀ ಬೆಟ್ಟಳ್ಳಿ ಮಾರಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . ಪಲ್ಲಕ್ಕಿ ಉತ್ಸವ ಅಲಂಕಾರ ಮತ್ತು ಮೆರವಣಿಗೆ : ಶ್ರೀ ಬೆಟ್ಟಳ್ಳಿ ಮಾರಮ್ಮ ಪಲ್ಲಕ್ಕಿ ಉತ್ಸವವನ್ನು ವೀಳ್ಯದೆಲೆ, ನಿಂಬೆ ಹಣ್ಣು ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ವಾದ್ಯ ಮೇಳಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಿನ್ನಲೆ : ಪ್ರತಿ ವರ್ಷಕೊಮ್ಮೆ ಹನೂರು ಪಟ್ಟಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಜರುಗಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ಆರ್.ಎಸ್. ದೊಡ್ಡಿ ಗ್ರಾಮದ ದೊಡ್ಡ ಕೆರೆಯಲ್ಲಿ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗುತ್ತದೆ. ಈ ವೇಳೆ ಆರ್.ಎಸ್.ದೊಡ್ಡಿ ಗ್ರಾಮಸ್ಥರು ದೇವಿಗೆ ಪಲ್ಲಕಿಯನ್ನು ಬಿದಿರಿನಿಂದ ತಯಾರು ಮಾಡಿ ಉತ್ಸವವನ್ನು ನಡೆಸುತ್ತಾ ಬಂದಿದ್ದರು. ಈ ಬಾರಿ ಗ್ರಾಮಸ್ಥರು ಶಾಶ್ವತವಾದ ಪಲ್ಲಕ್ಕಿಯನ್ನು ಎಲ್ಲರ ಸಹಕಾರದೊಂದಿಗೆ ಉತ್ಕøಷ್ಟವಾದ ಕಂಚು ಹಾಗೂ ಸ್ಟಿಲ್ ಲೋಹದಿಂದ ತಯಾರಿಸಿ ಪೂಜಾ ಕಾರ್ಯಕ್ಕೆ ಅರ್ಪಿಸುವ ಮೂಲಕ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವರ ಕೃಪೆಗೆ ಪಾತ್ರರಾಗಿದ್ದೇವೆ ಎಂದು ಗ್ರಾಮದ ಮುಖಂಡರು ತಿಳಿಸಿದರು.
0 ಕಾಮೆಂಟ್‌ಗಳು