ಸುನೀಲ್ ಅಪ್ಲೈಯನ್ಸ್ ಲಕ್ಕಿ ಡೀಪ್‍ನಲ್ಲಿ ನಾಗೇಶ್‍ಗೆ ಹೀರೋ ಬೈಕ್ ಬಂಪರ್ ಬಹುಮಾನ

ಮೈಸೂರು : ನಗರದ ವಿದ್ಯಾರಣ್ಯಪುರಂ ನಲ್ಲಿರುವ ಸುನೀಲ್ ಅಪ್ಲೈಯನ್ಸ್ ಶೋರೋಂ ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ಲಕ್ಕಿಡಿಪ್ ನಲ್ಲಿ ನಾಗೇಶ್ ಎಂಬವರು ಬಂಪರ್ ಬಹುಮಾನ ಪಡೆದು ಹೀರೋ ಬೈಕ್ ಪಡೆದರು.
ಅದೇ ರೀತಿ ಬಿ.ಮಹದೇವ್ ಅವರಿಗೆ ಪ್ರಥಮ ಬಹುಮಾನ ಎಲ್‍ಇಡಿ ಟಿವಿ, ಸಿದ್ದಲಿಂಗಯ್ಯ ಅವರಿಗೆ ದ್ವಿತೀಯ ಬಹುಮಾನವಾಗಿ ಮೈಕ್ರೋ ಓವನ್ ಮತ್ತು ಎಂ.ಎನ್.ಗೀತಾ ಅವರಿಗೆ ತೃತೀಯ ಬಹುಮಾನ ಹೋಂ ಥಿಯೇಟರ್ ನೀಡಲಾಯಿತು.  


ಬಿ.ಮಹದೇವ್ ಎಲ್‍ಇಡಿ ಟಿವಿ 
ಸುನೀಲ್ ಅಪ್ಲೈಯನ್ಸ್ ಶೋ ರೂಂ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಗ್ರಾಹಕರಿಗೆ ಲಕ್ಕಿ ಡಿಪ್ ಸೇವೆ ನೀಡಲಾಗುತ್ತಿದೆ. ಕಳೆದ 2 ತಿಂಗಳಿನಿಂದ ಕನಿಷ್ಠ 10 ಸಾವಿರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ 420 ಜನರಿಗೆ ಕೂಪನ್ ನೀಡಲಾಗಿತ್ತು. 


ಸಿದ್ದಲಿಂಗಯ್ಯ ಮೈಕ್ರೋ ಓವನ್
ಲಕ್ಕಿ ಡಿಪ್ ಕಾರ್ಯಕ್ರಮವನ್ನು ಮೂಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಉದ್ಘಾಟಿಸಿ ಮಾತನಾಡಿ, ಸುನೀಲ್ ಅಪ್ಲೈಯನ್ಸ್ ಮಾಲಿಕರು ಕಳೆದ 45 ವರ್ಷಗಳಿಂದ ಇಲ್ಲಿ ವ್ಯವಹಾರ ಮಾಡುತ್ತಿದ್ದು, ಪ್ರಾಮಾಣಿಕ ಸೇವೆಯಿಂದ ಗ್ರಾಹಕರನ್ನು ಆಕರ್ಷಿಸಿ ತಮ್ಮ ವ್ಯವಹಾರವನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಜತೆಗೆ ತಮ್ಮ ಲಾಭಾಂಶದಲ್ಲಿ ಇಂತಹ ಲಕ್ಕಿ ಡಿಪ್ ಯೋಜನೆಗಳನ್ನು ನೀಡಿ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಿದ್ದಾರೆ ಎಂದರು, ಇದೇ ಸಂದರ್ಭದಲ್ಲಿ ಅವರು ಬಂಪರ್ ಬಹುಮಾನದ ಕೂಪನ್ ಸಹ ಎತ್ತಿದರು.

JA.J£ï.VÃvÁ ºÉÆÃA yAiÉÄÃlgï  

ನಗರಪಾಲಿಕೆ ಸದಸ್ಯ ಮಾವಿ ರಾಮ್ ಪ್ರಸಾದ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ ಸುನೀಲ್ ಅಪ್ಲೈಯನ್ಸ್ ಗ್ರೂಪ್ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಲಕ್ಕಿ ಡಿಪ್ ಕಾರ್ಯಕ್ರಮ ಏರ್ಪಡಿಸಿ ಗ್ರಾಹಕರಿಗೆ ಉಡುಗೊರೆ ನೀಡುತ್ತಾ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸುನೀಲ್ ಗ್ರೂಪ್ ಮಾಲಿಕರಾದ ಸುನೀಲ್ ಜೈನ್, ಶ್ರೇಯಸ್ ಜೈನ್ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು