ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಇಸ್ಲಾಂ ಧರ್ಮ ಗುರುಗಳಾದ ಮುಜಮ್ಮಿಲ್ ಸಾಹಿಬ್ ರಶ್ದಿ ಕರೆ

ವರದಿ-ಶಾರುಕ್ ಖಾನ್, ಹನೂರು

ಹನೂರು : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ  ಸಂದೇಶಗಳನ್ನು ಅಕ್ಷರಶಃ ಪಾಲಿಸಿ ಇಸ್ಲಾಂ ಧರ್ಮದ ಪ್ರಮುಖ ಐದು ಹಕ್ಕುಗಳನ್ನು ಪರಿಪೂರ್ಣವಾಗಿ ಅನುಸರಿಸುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದು ಇಸ್ಲಾಂ ಧರ್ಮ ಗುರುಗಳಾದ ಮುಜಮ್ಮಿಲ್ ಸಾಹಿಬ್ ರಶ್ದಿಯವರು ಮುಸ್ಲಿಂ ಬಾಂಧವರಿಗೆ ಕರೆ ನೀಡಿದರು. 
ತಾಲ್ಲೂಕಿನ ಚಿಗತಾಪುರ ಗ್ರಾಮದಲ್ಲಿ ಇಂದು ರಾತ್ರಿ ನಡೆದ ಜಲ್ಸಾ ಸಿರತೇ ಸಾಖಿ ಕೌಸರ್ ಸಲ್ಲೋಲ ವಲೈ ಹಿ ವ ಸಲ್ಲಂ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಮುಸ್ಲಿಮರಿಗೆ ಉಪದೇಶ ನೀಡಿ ಅವರು ಮಾತನಾಡಿದರು. 

ಇಸ್ಲಾಂ ಧರ್ಮ ಕಲಿಮಾ, ನಮಾಜ್, ಉಪವಾಸ, ಧಾನಧರ್ಮ ಹಾಗೂ ಹಜ್ ಯಾತ್ರೆಯ ಪ್ರತೀಕವಾಗಿದ್ದು, ಇದನ್ನು ಮನಸಾರೆ ಪರಿಪೂರ್ಣವಾಗಿ ಅನುಸರಿಸಿದಾಗ ಭಗವಂತನ ಅನುಗ್ರಹಕ್ಕೆ ಒಳಗಾಗುತ್ತೀರಿ ಎಂದು ಕಿವಿಮಾತು ಹೇಳಿದರು.
ಇಂದು ರಾತ್ರಿ ನಾವುಗಳು ಜಮಾವಣೆಗೊಂಡಿರುವುದು ಇಸ್ಲಾಂ ಧರ್ಮದ ಬಗ್ಗೆ ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವ ಹಾಗೂ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ.ಸ) ಅವರ ಸನ್ಮಾರ್ಗದಲ್ಲಿ ಪ್ರಾಮಾಣಿಕವಾಗಿ ನಡೆಯುವುದೇ ಜಲ್ಸಾ ಸಭೆಯ ಉದ್ದೇಶವಾಗಿದೆ ಎಂದರು.
ಜಲ್ಸಾ ಕಾರ್ಯಕ್ರಮದಲ್ಲಿ ಗುರುಗಳಾದ ಮುಜಮ್ಮಿಲ್ ಸಾಹಿಬ್ ರಶ್ದಿ ಅಬೂಬಕ್ಕರ್ ಸಿದ್ದಿಖ್ ಖಾಸ್ಮಿ ಸೇರಿದಂತೆ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು