ಯಶಸ್ವಿಯಾಗಿ ಜರುಗಿದ ಸಂತ ಜೋಸೆಫರ ಶಿಕ್ಷಣ ಮಹಾವಿದ್ಯಾನಿಲಯದ ಸುವರ್ಣ ಸಂಭ್ರಮ

ವಿದ್ಯಾರ್ಥಿಗಳ ಬಹುಮುಖ ವಿಕಾಸದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು : ಪ್ರೊ.ಜಿ.ಹೇಮಂತ್ ಕುಮಾರ್

-ನಜೀರ್ ಅಹಮದ್, ಮೈಸೂರು

ಮೈಸೂರು : 1971ರಲ್ಲಿ ಮೈಸೂರು ಧರ್ಮಕ್ಷೇತ್ರ ಶೈಕ್ಷಣಿಕ ಮಂಡಳಿಯಿಂದ ನಗರದ ಜಯಲಕ್ಷ್ಮಿಪುರಂನಲ್ಲಿ ಪ್ರಾರಂಭವಾದ  ಸಂತ ಜೋಸೆಫರ ಶಿಕ್ಷಣ ಮಹಾವಿದ್ಯಾಲಯ 50 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸ್ಮರಣಾರ್ಥ ಇತ್ತೀಚೆಗೆ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಜಯಲಕ್ಷ್ಮಿಪುರಂ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಖಾಗಿ ಆಗಮಿಸಿದ್ದ ಮೈಸೂರು ವಿವಿ ಕುಲಪತಿ ಡಾ.ಜಿ.ಹೇಮಂತ್ ಕುಮಾರ್ ಮಾತನಾಡಿ, ಶಿಕ್ಷಕರು ಮಾತ್ರ ಶಿಕ್ಷಕರನ್ನು ರೂಪಿಸಬಲ್ಲರು. ವಿದ್ಯಾರ್ಥಿಗಳ ಬಹುಮುಖ ವಿಕಾಸದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಅವರು ನಿರಂತರ ಕಲಿಕಾರ್ಥಿಗಳಾಗಿ ವಿಷಯ ಜ್ಞಾನ, ಬೋಧನಾಶಾಸ್ತ್ರ ಜ್ಞಾನ ಹಾಗೂ ಇನ್ನಿತರ ಹಲವು ಕೌಶಲಗಳನ್ನು ಹೊಂದಿದ್ದಾಗ ಮತ್ತು ತಮ್ಮ ವೃತ್ತಿಯಲ್ಲಿ ಒಲವಿದ್ದಾಗ ಮಾತ್ರ ಅತ್ಯುತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಅದಮ್ಯ ಚೈತನ್ಯವನ್ನು ಹೊರಗೆಳೆಯಬಹುದು. ಸಂತ ಜೋಸೆಫರ ಶಿಕ್ಷಣ ಮಹಾವಿದ್ಯಾಲಯವು 50 ವರ್ಷಗಳಲ್ಲಿ ಸಾವಿರಾರು ಉತ್ತಮ ಶಿಕ್ಷಕರನ್ನು ರೂಪಿಸಿದ್ದು, ಕಾಲೇಜು ವಜ್ರ ಮಹೋತ್ಸವ ಮತ್ತು ಶತಮಾನೋತ್ಸವವನ್ನು ಆಚರಿಸುವಂತೆ ಆಗಲಿ ಎಂದು ಶುಭ ಕೋರಿದರು.

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹಾಗೂ ಕಾಲೇಜಿನ  ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ಜಗದೀಶ್ ಮಾತನಾಡಿ, ಮುಂದಿನ ದಶಕ ಅತ್ಯುತ್ತಮ ಶಿಕ್ಷಕರದು ಎಂದು ಭವಿಷ್ಯ ನುಡಿದರು.
ಶಿಕ್ಷಕರಾಗ ಹೊರಟಿರುವವರಿಗೆ ಸ್ಫೂರ್ತಿ ನೀಡಿ ಕಾಲೇಜಿನಲ್ಲಿ ತಾವು ಪಡೆದ ಗುಣಮಟ್ಟದ ತರಬೇತಿಯಿಂದಾಗಿ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನೂತನ ಪಿಯುಸಿ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಮೈಸೂರಿನ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ.ಕೆ.ಎ. ವಿಲಿಯಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 
ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು.
ಧರ್ಮಗುರುಗಳಾದ ವಿಜಯ್ ಕುಮಾರ್, ಎಸ್‍ಜೆಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಿಯ ಮ್ಯಾಥ್ಯೂ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಡಾ.ಎ.ಖಾದರ್ ಪಾμÁ, 
ಮೈಸೂರು ವಿವಿ ಕುಸಚಿವರಾದ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕೆ.ಎಸ್.ಓ.ಯು ಕುಲಸಚಿವರಾದ ಪ್ರೊ.ಕೆ.ಬಿ.ಪ್ರವೀಣ, ಸಿಡಿಸಿ ನಿರ್ದೇಶಕರಾದ ಪ್ರೊ.ಎನ್.ಕೆ.ಲೋಕನಾಥ್, ನಿವೃತ್ತ ಧರ್ಮಾಧ್ಯಕ್ಷಾರದ ಡಾ.ಥಾಮಸ್ ಆಂಟೋನಿ ವಾಜಪಿಳ್ಳಿ, ಗುರುಗಳಾದ ಆಡ್ ಜಾನ್ ಮೆಂಡೋನ್ಹಾ, ಡೊಮಿನಿಕ್ ವಾಜ್, ಮದ
ಮುತ್ತು, ಅವಿನಾಶ್ ಎಚ್.ಎನ್., ಮತ್ತಿತರರು ಇದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು