`ಪರೀಕ್ಷಾ ಪದ್ಧತಿಗಳು ಬದಲಾಗುವ ಅಗತ್ಯವಿದೆ’


-ಹನುಮಂತ, ಶಿಕ್ಷಕರು, ಶಿಕ್ಷಣಾಧಾರ ಸಂಶೋಧನಾ ಕೇಂದ್ರ, ನಂಜನಗೂಡು. ಮೊಬೈಲ್ : 9538771442

ಸಾಮಾನ್ಯವಾಗಿ ಹೆಚ್ಚಿನ ಮಕ್ಕಳು ಶಾಲಾ ಪಠ್ಯ ಪುಸ್ತಕಗಳನ್ನು ತೆರೆದು ನೋಡುವ ಪದ್ಧತಿ ದಿನೇದಿನೇ ಕಡಿಮೆ ಆಗುತ್ತಿದೆ. ತರಗತಿಗಳಲ್ಲಿ ಪಠ್ಯ ಪುಸ್ತಕಗಳ ಆಧಾರಿತ ಪಾಠಗಳನ್ನು ಹೇಳಿ ಕೊಡಲಾಗುತ್ತಿದೆ. ಆದರೂ, ಮಕ್ಕಳು ಪಠ್ಯಪುಸ್ತಕಗಳನ್ನು ಸರಿಯಾಗಿ ಗಮನಿಸದೇ ಇರುವುದು ಹೆಚ್ಚಾಗಿದೆ. ಇದರಿಂದಾಗಿ ಪಾಠದ ಮಾಹಿತಿಗಳನ್ನು ಸರಿಯಾಗಿ ಬರೆದು ಕೊಳ್ಳುವುದು ಮತ್ತು ಜೋಪಾನ ಮಾಡಿಟ್ಟುಕೊಳ್ಳುವ ಸ್ವಭಾವ ಕಡಿಮೆ ಆಗುತ್ತಿದೆ. 
ಪಠ್ಯಗಳನ್ನು ಅಭ್ಯಾಸಕ್ಕೆ ಬಳಸಿಕೊಳ್ಳುವುದು ಕಲಿಕೆ ಮತ್ತು ಬಳಕೆ ಸಂಪ್ರದಾಯ ಇಳಿಮುಖವಾಗಿದೆ. ಪರೀಕ್ಷೆಯ ದಿನದಂದು ಸಣ್ಣ ಅಕ್ಷರಗಳ ಜೆರಾಕ್ಸ್ ಹಾಳೆಗಳನ್ನು ಬಳಸುವುದು ಮತ್ತು ಅವರಿವರನ್ನು ನೋಡಿ ಬರೆಯಲು ಸಂಚು ಮಾಡುವುದು, ಹೀಗೆ ಏನೇನೆಲ್ಲಾ ತಪ್ಪುಗಳು ಮಾಡುವುದಿದೆ. ಅಲ್ಪ ಸ್ವಲ್ಪ ಬರೆದು ಹೋಗುವುದೂ ಇದೆ.
ಈ ಎಲ್ಲಾ ವಿಚಾರಗಳನ್ನು ಅವಲೋಕನ ಮಾಡಿ, ಪುಸ್ತಕಗಳನ್ನು ಸರಿಯಾಗಿ ಗಮನಿಸದಿರುವ ಮಕ್ಕಳು ಪರೀಕ್ಷೆಗಾಗಿ ಪುಸ್ತಕ ಜೋಪಾನ ಮಾಡಿಟ್ಟುಕೊಂಡು, ಪರೀಕ್ಷೆಯ ದಿನವಾದರೂ ಸಂಪೂರ್ಣವಾಗಿ ಪುಸ್ತಕ ತೆರೆದು ಎಲ್ಲಾ ಪಾಠಗಳ ಮೂಲೆ ಮೂಲೆಗಳಲ್ಲಿ ಹುಡುಕಿ ನಿಗದಿತ ಸಮಯದಲ್ಲಿ ಬರೆಯುವ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಮಾಡಬೇಕಿದೆ.
ನಿಗದಿತ ಸಮಯದಲ್ಲಿ ಪ್ರಶ್ನೆಗಳನ್ನು ಓದಿಕೊಳ್ಳಬೇಕು, ಯಾವ ಪಾಠದಲ್ಲಿ ಯಾವ ಭಾಗದಲ್ಲಿ ಉತ್ತರವಿದೆ ಎಂದು ಹುಡುಕಬೇಕು. ಇದು ಒಂದು ವರ್ಗದ ಮಕ್ಕಳ ಬುದ್ದಿಗೆ, ಪರೀಕ್ಷೆಗೆ ವರದಾನವಾಗಬಹುದು.
ನಕಲು ಮಾಡಿ ಸಿಕ್ಕಿ ಬೀಳುವುದು ಇದರಿಂದ ಮುಂದಿನ ಪರೀಕ್ಷೆಗೆ ಅವಕಾಶ ಕಳೆದುಕೊಳ್ಳುವುದು ಇತ್ಯಾದಿ ತಪ್ಪು ನಡೆಗಳಿಗೆ ಹೋಗದಂತೆ ನೋಡಿಕೊಳ್ಳಬಹುದು.
ಇಡೀ ಪುಸ್ತಕದಲ್ಲಿ ಹುಡುಕಿಕೊಂಡು ಬರೆಯುವ ಕೌಶಲವಾದರೂ ಅಂತಹ ಮಕ್ಕಳಲ್ಲಿ ಬೆಳೆಯುವಂತಾಗಲಿ ಎಂದು ಆಶಿಸೋಣ. ಮುಂದಿನ ದಿನಗಳಲ್ಲಿ ಅಂತಹ ಮಕ್ಕಳ ಹಿತಕ್ಕಾಗಿ ಬದಲಾವಣೆಯಾಗಲಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು