ಯಶಸ್ವಿಯಾಗಿ ಜರುಗಿದ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ ನೋಂದಣಿ ಶಿಬಿರ

 -ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನ ಎಲ್ಲೇಮಾಳ ಗ್ರಾಪಂ ವ್ಯಾಪ್ತಿಯ ಚಿಗತಾಪುರ ಗ್ರಾಮದಲ್ಲಿ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ ನೋಂದಣಿ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ್ ಒನ್ ಕೇಂದ್ರದ ಸೈಯದ್ ಸಲೀಂ ಮಾತನಾಡಿ, ಗ್ರಾಮೀಣ ಪ್ರದೇಶದ ರೈತಾಪಿ ಜನರು ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಈ ಆರೋಗ್ಯ ಭಾರತ್ ಕಾರ್ಡ್‍ನ್ನು ಪಡೆಯಲು ನೋಂದಣಿ ಮಾಡಿಸಬೇಕು. ಇದರಿಂದ ಬಿಪಿಎಲ್ ಕಾರ್ಡ್ ದಾರರಿಗೆ 5 ಲಕ್ಷದವರೆಗೆ ಮತ್ತು ಎಪಿಎಲ್ ಕಾರ್ಡುದಾರರಿಗೆ 1.5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುತ್ತದೆ ಎಂದರು.
ಗ್ರಾಪಂ ಸದಸ್ಯೆ ಮುಮ್ತಾಜ್ ಬೇಗಂ ಮಾತನಾಡಿ, ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ (ಅಭಾ) ಮತ್ತು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಂ.ಜೆ.ಎ.ವೈ) ಕಾರ್ಡ್ ನೋಂದಣಿ ಮೆಗಾ ಆಂದೋಲನದಲ್ಲಿ ತಮ್ಮ ಹೆಸರು ನೋಂದಾಯಿಸಿ ಈ ಸೇವೆಯನ್ನು ಪಡೆದುಕೊಳಬೇಕೆಂದು ಸಲಹೆ ನೀಡಿದರು.
ಆಶಾ ಕಾರ್ಯಕರ್ತೆಯರಾದ ನಾಹೀದಾ ಬಾನು, ಗೌರಮ್ಮ, ಜ್ಯೋತಿ, ಸರೋಜ, ಸುಶೀಲ ಮತ್ತು ಗ್ರಾಮಸ್ಥರು ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು