ಶ್ರೀ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರದ ಬಳಿ ಕುಸಿದು ಬಿದ್ದು ಮೈಸೂರಿನ ಮಹಿಳೆ ಸಾವು
ನವೆಂಬರ್ 08, 2022
-ಶಾರುಕ್ ಖಾನ್, ಹನೂರು
ಹನೂರು : ಶ್ರೀ ಮಲೆ ಮಹದೇಶ್ವರಬೆಟ್ಟದಲ್ಲಿ ದೇವರ ದರ್ಶನ ಪಡೆದು ರಾಜಗೋಪುರದ ಮುಂಭಾಗ ಬರುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಜರುಗಿದೆ. ಮೈಸೂರು ತಾಲ್ಲೂಕು ಇಲವಾಲ ಗ್ರಾಮದ ಫುಟ್ಟಗೌರಮ್ಮ ಮೃತಪಟ್ಟ ದುರ್ದೇವಿ. ಪುಟ್ಟಗೌರಮ್ಮ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಮಲೆಮಹದೇಶ್ವರ ಬೆಟ್ಟಕ್ಕೆ ಪೂಜೆಗೆಂದು ಆಗಮಿಸಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಹೊರ ಬರುತ್ತಿದ್ದಂತೆ ರಾಜಗೋಪುರದ ಮುಂಭಾಗ ದಿಢೀರನೆ ಕುಸಿದು ಬಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರೂ ಯಾವುದೇ ಆಂಬುಲೆನ್ಸ್ ಅಥವಾ ಇನ್ನಿತರೆ ತುರ್ತು ವಾಹನಗಳು ದೊರೆಯಲಿಲ್ಲ ನಂತರ ಪರೀಕ್ಷಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
0 ಕಾಮೆಂಟ್‌ಗಳು