ಕಾರ್ಕಳ್ಳಿ ಗ್ರಾಮದಲ್ಲಿ `ಕದಲೂರು ಉದಯ್’ ಅಭಿಮಾನಿ ಸಂಘ ಉದ್ಘಾಟನೆ

ಮದ್ದೂರು : ತಾಲೂಕಿನ ಕಾರ್ಕಳ್ಳಿ ಗ್ರಾಮದಲ್ಲಿ ತಮ್ಮದೇ ಹೆಸರಿನ ಅಭಿಮಾನಿ ಸಂಘವನ್ನು ಕದಲೂರು ಉದಯ್ ಉದ್ಘಾಟಿಸಿದರು. 
ನಂತರ ಅವರು ಮಾತನಾಡಿ, ಮದ್ದೂರು ತಾಲ್ಲೂಕಿನ ಸರ್ವೋತೋಮುಖ ಅಭಿವೃದ್ಧಿಗಾಗಿ ಹಲವಾರು ರೀತಿ ಸೇವಾ ಕಾರ್ಯವನ್ನು ಮಾಡುತ್ತಿದ್ದೇನೆ. ನಾನೂ ಕೂಡ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಉದ್ಯೋಗ ಆರಿಸಿ ನಗರ ಪ್ರದೇಶದಲ್ಲಿ ಉದ್ದಿಮೆಗಳನ್ನು ತೆರೆದು ಹಣ ಸಂಪಾದಿಸಿ ನನ್ನ ತವರು ತಾಲೂಕನ್ನು ಅಭಿವೃದ್ಧಿ ಮಾ ಡುವ ಗುರಿ ಹೊಂದಿದ್ದೇನೆ ಎಂದರು.
ಜನಪ್ರತಿನಿಧಿಗಳು ತಾಲೂಕಿನ ಜನತೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದರಿಂದ ತಾಲ್ಲೂಕಿನ ಜನತೆ ನನ್ನ ಜತೆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಬೆಳ್ಳಿ ರಥದ ಮೂಲಕ ಕದಲೂರು ಉದಯ್ ಅವರನ್ನು ವಿವಿಧ ವಾದ್ಯಗಳು, ಕಲಾತಂಡಗಳ ಜತೆ ಮೆರವಣಿಯಲ್ಲಿ ಬೃಹತ್ ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಈ ವೇಳೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಮನ್  ಮುಲ್ ಮಾಜಿ ಅಧ್ಯಕ್ಷ ಎಸ್.ಬಸವೇಗೌಡರನ್ನು  ಸನ್ಮಾನಿಸಲಾಯಿತು. 
ಸಚ್ಚಿನ್, ಸಿದ್ದೇಗೌಡ, ನಂದೀಶ್, ಬಾಲು, ಅವಿನಾಶ್, ಪ್ರದೀಪ್, ಸಿದ್ದೇಶ್, ಗುರುರಾಜ್ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು