2.81 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಚಾಲನೆ
ನವೆಂಬರ್ 28, 2022
ಹನೂರು : 2.81 ಕೋಟಿ ರೂ. ವೆಚ್ಚದಲ್ಲಿ ಬಂಡಳ್ಳಿ ಮುಖ್ಯ ರಸ್ತೆಯ ಸಮೀಪ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್.ನರೇಂದ್ರ ಸೋಮವಾರ ಭೂಮಿಪೂಜೆ ಸಲ್ಲಿಸಿದರು. ಬಳಿಕ ಅವರು ಮಾತನಾಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 5 ಕೋಟಿ ಹಣ ಬಿಡುಗಡೆಯಾಗಿದ್ದು ಈ ಪೈಕಿ ಪಟ್ಟಣದ ವ್ಯಾಪ್ತಿಯ ಸಿವಿಲ್ ಕಾಮಗಾರಿಗೆ 2.81 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ಸ್ಮಶಾನದ ಅಭಿವೃದ್ಧಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಹನೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಎರಡು ಹಾಗೂ ಮೂರನೇ ವಾರ್ಡ್ ಗೆ ಸೇರಿದ ಸೊಪ್ಪಿನಕೇರಿ ಹಾಗೂ ದೇವಾಂಗ ಪೇಟೆ ಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇನ್ನು ಹೆಚ್ಚಿನ ಅನುದಾನವನ್ನು ನೀಡಬೇಕಾಗಿದೆ ಎಂದು ತಿಳಿಸಿದರು. ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಗೆ ಅಭಿವೃದ್ಧಿಗೆ ಈಗಾಗಲೇ ಟೆಂಡರನ್ನು ಕರೆದಿದ್ದು, ಶೀಘ್ರದಲ್ಲೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸುತ್ತೇವೆ ಎಂಬುದಾಗಿ ತಿಳಿಸಿದರು. ಪಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಗಿರೀಶ್, ಮುಖ್ಯಾಧಿಕಾರಿ ಮೂರ್ತಿ, ಸದಸ್ಯರಾದ ಹರೀಶ್, ಮಹೇಶ್, ಪುಟ್ಟರಾಜು, ಮಹೇಶ್, ಸಂಪತ್ತು, ಮುಖಂಡ ನಿಂಗಣ್ಣ, ಗುತ್ತಿಗೆದಾರ ಅಶೋಕ್ ಇತರರು ಇದ್ದರು.
0 ಕಾಮೆಂಟ್‌ಗಳು