ಶಾಸಕ ಎಲ್.ನಾಗೇಂದ್ರ ಅವರಿಂದ ನೂತನ ಬಸ್ ನಿಲ್ಧಾಣ ಉದ್ಘಾಟನೆ, ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
ನವೆಂಬರ್ 10, 2022
ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.1 ರಲ್ಲಿ 10 ಲಕ್ಷ ರೂ. ಶಾಸಕರ ವಿವೇಚನಾ ಅನುದಾನದಲ್ಲಿ ಪುಟ್ಟಸ್ವಾಮಿ ಪ್ರೌಢಶಾಲೆಯ ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಎಲ್.ನಾಗೇಂದ್ರ ಗುರುವಾರ ಬೆಳಿಗ್ಗೆ ಭೂಮಿಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಪುಟ್ಟಸ್ವಾಮಿ ಶಾಲೆಯಲ್ಲಿ ಈ ಭಾಗದ ಬಡ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಶಾಲಾ ಕೊಠಡಿಯ ಅಗತ್ಯವಿದೆ ಇದನ್ನು ಮನಗಂಡು ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಲಕ್ಷ್ಮಿ ಶಿವಣ್ಣ, ಮುಖಂಡರಾದ ಪುನೀತ್, ಮಹೇಶ್, ಕಿರಣ್, ಸಂಸ್ಥೆಯ ಕಾರ್ಯದರ್ಶಿ ಲಿಂಗರಾಜು, ಕೆ.ಎಂ.ಬಸವೇಗೌಡ, ಸತೀಶ್, ನಾಗರಾಜು, ಮಾದೇಗೌಡ, ಅರ್ಚನ, ವಿವೇಕ್, ಮಮತಾ, ಪ್ರಕಾಶ್ ಇನ್ನಿತರರು ಇದ್ದರು.
ನಂತರ ಶಾಸಕರು ಮಂಚೇಗೌಡನ ಕೊಪ್ಪಲು ವಾರ್ಡ್ 2ರಲ್ಲಿ ಅಭಿಷೇಕ್ ಸರ್ಕಲ್ ಬಳಿ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿದರು. ಮಹಾನಗರಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು