ಅಪರಿಚಿತ ವ್ಯಕ್ತಿಯ ಶವ ಪತ್ತೆ : ಗುರುತು ಪತ್ತೆ ಹಚ್ಚಲು ಮನವಿ
ನವೆಂಬರ್ 15, 2022
ಪಾಂಡವಪುರ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಬೋವಿ ಕಾಲೊನಿಗೆ ಹೋಗುವ ರಸ್ತೆಯಲ್ಲಿನ ಆನುವಾಳು ಮಲ್ಲಿಕಾರ್ಜುನ ಎಂಬವರ ಹೊಸ ಕಟ್ಟಡದ ಹಿಂಭಾಗದಲ್ಲಿ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಕೆಲದಿನಗಳಿಂದ ಅಸ್ವಸ್ಥರಾಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ವ್ಯಕ್ತಿಯ ಬಗ್ಗೆ ಯಾರಿಗಾದರೂ ತಿಳಿದಿದ್ದಲ್ಲಿ ಪಾಂಡವಪುರ ಪೊಲೀಸ್ ಠಾಣೆಯನ್ನು (08236-255132) ಸಂಪರ್ಕಿಸುವಂತೆ ಕೋರಲಾಗಿದೆ.
0 ಕಾಮೆಂಟ್‌ಗಳು