ನಿಷ್ಕಲ ಎಸ್., ಮೈಸೂರು,
ಮೈಸೂರು : ಪದೇ ಪದೇ ಮುಸ್ಲೀಮರ ದೇಶ ಪ್ರೇಮವನ್ನು ಪ್ರಶ್ನಿಸುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು, ಫೆ. 17 ರಂದು ಬಹಿರಂಗ ಚರ್ಚೆಗೆ ಬಂದು ಮೊದಲು ತಮ್ಮಗಳ ದೇಶಪ್ರೇಮವನ್ನು ಸಾಬೀತುಪಡಿಸಿ ಎಂದು ಜಾಗೃತ ಕರ್ನಾಟಕ ವೇದಿಕೆಯ ನಿವೃತ್ತ ಡಿವೈಎಸ್‌ಪಿ ಸುಹೇಲ್ ಅಹಮದ್ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರಕ್ಕೆ ಸವಾಲು ಹಾಕಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೆಹಲಿಯ ಇಂಡಿಯಾ ಗೇಟ್ ಮುಂದೆ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿ ಮೃತಪಟ್ಟ 64 ಸಾವಿರ ಸ್ವಾತಂತ್ರö್ಯ ಹೋರಾಟಗಾರರಲ್ಲಿ 30 ಸಾವಿರ ಜನರು ಮುಸಲ್ಮಾನರೇ ಆಗಿದ್ದಾರೆ. ಇಲ್ಲಿ ಒಬ್ಬನೇ ಒಬ್ಬ ಬಿಜೆಪಿ ಮತ್ತು ಆರೆಸ್ಸೆಸ್ಸಿನವರ ಹೆಸರು ಇಲ್ಲ, ಇರ‍್ಯಾರೂ ಸ್ವಾತಂತ್ರ÷್ಯ ಚಳವಳಿಯಲ್ಲಿ ಭಾಗವಹಿಸಿಲ್ಲ, ಒಂದು ವೇಳೆ ಭಾಗವಹಿಸಿದ್ದೇ ಆದರೆ ಕನಿಷ್ಠ 10 ಜನರ ಹೆಸರು ಹೇಳಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದ ಹಿರಿಯ ರಾಜಕೀಯ ನಾಯಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ, ಆದಾಗ್ಯೂ ಎಂಎಲ್‌ಸಿ ಸಿ.ಟಿ.ರವಿ ಅವರು ನಸೀರ್ ಅಹಮದ್ ಅವರದು ಪಾಕಿಸ್ತಾನದ ನಾಲಿಗೆ ಎಂದು ಹೇಳಿದ್ದು, ಅಸಮಂಜಸ ಹೇಳಿಕೆ, ಪಾಕಿಸ್ತಾನಕ್ಕೆ ಹೋಗಿ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ ನಿಮ್ಮದೇ ಪಕ್ಷದ ನಾಯಕರಾದ ಲಾಲಕೃಷ್ಣ ಅಡ್ವಾನಿ ಅವರದು ಯಾವ ದೇಶದ ನಾಲಿಗೆ? ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಗಳ ಮದುವೆಗೆ ಹೋಗಿ ಬರ‍್ಯಾನಿ ತಿಂದುಬAದ ಪ್ರಧಾನಿ ನರೇಂದ್ರ ಮೋದಿ ಅವರದು ಯಾವ ದೇಶದ ನಾಲಿಗೆ ಎಂದು ಪ್ರಶ್ನಿಸಿದ ಸುಹೇಲ್ ಅಹಮದ್ ಅವರು,
ಬಿಜೆಪಿ ರಾಜ್ಯದಲ್ಲಿ ನಿರಂತರವಾಗಿ ಸಂವಿಧಾನದ ಆಶಯಗಳ ವಿರುದ್ಧ ಕೆಲಸ ಮಾಡುತ್ತಾ ಸಮಾಜದಲ್ಲಿ ಒಡಕು ಉಂಟು ಮಾಡಲು ಉದ್ದೇಶಿಸಿದೆ. ಇದಕ್ಕಾಗಿ ಆರೆಸ್ಸೆಸ್ ಮತ್ತು ಬಿಜೆಪಿಯವರಿಗೆ ಅವರ ದೇಶಪ್ರೇಮ ಸಾಬೀತುಪಡಿಸಲು ಫೆಬ್ರವರಿ 17ರಂದು ನಾವು ಬಹಿರಂಗ ಆಹ್ವಾನ ನೀಡುತ್ತಿದ್ದೇವೆ ಎಂದರು.
ಈ ನೆಲದ ಹಿಂದೂ, ಮುಸ್ಲಿಂ, ಕ್ರೆöÊಸ್ತ, ಸಿಖ್, ಪಾರ್ಸಿ ಸಮುದಾಯಗಳಿಗೆ ಸೇರಿದ ಲಕ್ಷಾಂತರ ಜನರು ಒಟ್ಟಿಗೇ ಹೋರಾಡಿಯೇ ಸ್ವಾತಂತ್ರö್ಯ ಪಡೆದಿದ್ದೇವೆ. ಅದ್ಭುತವಾದ ಸಂವಿಧಾನವನ್ನೂ ಪಡೆದುಕೊಂಡು ಈ ದೇಶ ರೂಪ ತಾಳಿದೆ. ಈ
ದೇಶವನ್ನು ಕಾಪಾಡುವುದರಲ್ಲಿಯೂ ಈ ಎಲ್ಲಾ ಧರ್ಮಗಳ ಜನರೂ ಒಟ್ಟಿಗೇ ಕೆಲಸ ಮಾಡಿದ್ದಾರೆ; ತ್ಯಾಗ- ಬಲಿದಾನಗಳನ್ನೂ ಮಾಡಿದ್ದಾರೆ. ಆದರೆ, ಈ ದೇಶದ ಸ್ವಾತಂತ್ರ÷್ಯ ಚಳವಳಿಯಲ್ಲಿ ಆರೆಸ್ಸೆಸ್ಸಿನವರು ಎಷ್ಟು ಜನ ಭಾಗವಹಿಸಿದ್ದಾರೆ? ಎಷ್ಟು ಜನ ಅದರಲ್ಲೇ ಪ್ರಾಣತ್ಯಾಗ ಮಾಡಿದ್ದಾರೆ? ಎಷ್ಟು ಜನ ತಮ್ಮ ಜೀವಿತಾವಧಿಯುದ್ದಕ್ಕೂ ಸ್ವಾತಂತ್ರಾAದೋಲನದಲ್ಲೇ ಉಳಿದುಕೊಂಡರು? ಕ್ಷಮಾಪಣೆ ಕೇಳಿ ಬ್ರಿಟಿಷರ ಕಾಲಿಗೆ ಬಿದ್ದವರು ಯಾರು?
ಇವರು ಗಾಂಧೀಜಿಯನ್ನು ಅವಮಾನಿಸುತ್ತಾರೆ, ಅಂಬೇಡ್ಕರ್ ಬರೆದ ಸಂವಿಧಾನವನ್ನು ತಿರಸ್ಕಾರದಿಂದ ನೋಡುತ್ತಾರೆ, ಇವರ ಸಂಘಟನೆ ಮತ್ತು ನಾಯಕರನ್ನು ಪ್ರಶ್ನಿಸಿದವರನ್ನು ಪಾಕಿಸ್ತಾನಿ ಎಂದು ಸಲೀಸಾಗಿ ಹೇಳಿ ಬಿಡುತ್ತಾರೆ. ಇವರ ಈ ನಿಲುವನ್ನು ಬಹಿರಂಗವಾಗಿ ಪ್ರಶ್ನಿಸದೆ ಹೋದರೆ ಆರ್.ಎಸ್.ಎಸ್. ಅನ್ನು ಒಪ್ಪದವರು ಈ ದೇಶಕ್ಕೆ ಸೇರಿದವರೇ ಅಲ್ಲ ಎಂದು ಇವರು ಹೇಳುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇವರೇ ಈ ದೇಶದ ಸ್ವಾತಂತ್ರ÷್ಯ ಹೋರಾಟದ ಜೊತೆಗೆ ಗುರುತಿಸಿಕೊಂಡಿರಲಿಲ್ಲ. ಇವೆಲ್ಲವೂ ಸಾರ್ವಜನಿಕವಾಗಿ ಚರ್ಚೆಯಾಗಿ ಆರೆಸ್ಸೆಸ್ಸಿನ ದೇಶಪ್ರೇಮವನ್ನು ಸಾಬೀತುಪಡಿಸಲು ಇದೊಂದು ಅವಕಾಶ. ಹಾಗಾಗಿ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಯಾರು ಬೇಕಾದರೂ ಬಂದು ಈ ಕೆಲಸ ಮಾಡಬೇಕೆಂದು ನಾವು ಸವಾಲು ಹಾಕುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಡಾ.ಮಧು, ಮೋಹನ್ ಜಿ.ಕೆ., ಜಮಾತೆ ಇಸ್ಲಾಮಿ ಹಿಂದ್‌ನ ವಾಹಿದ್, ಅಸಾದುಲ್ಲಾ ಖಾನ್ ಇದ್ದರು.
ಈ ದೇಶವು ಎಲ್ಲರಿಗೂ ಸೇರಿದ್ದು, ವೈವಿಧ್ಯತೆಯು ದೇಶದ ಶಕ್ತಿ, ವಿವಿಧತೆಯಲ್ಲಿ ಏಕತೆಯೇ ಈ ದೇಶದ ವಿಶಿಷ್ಟತೆ ಎಂದು ಮಹಾನ್ ನಾಯಕರೆಲ್ಲರೂ ಸಾರಿದ್ದಾರೆ. ಅದೇ ಈ ನೆಲದ ಸ್ವಾತಂತ್ರ÷್ಯ ಚಳವಳಿಯ ಸಂದೇಶವಾಗಿದೆ; ಸಂವಿಧಾನದ ಆಶಯವಾಗಿದೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ಸಿನವರು ಇದರ ವಿರುದ್ಧ ಇದ್ದಾರೆ. ಸದಾಕಾಲ ಸಮಾಜದಲ್ಲಿ ಬಿರುಕು ಉಂಟು ಮಾಡುವುದೇ ಬಿಜೆಪಿಯ ಉದ್ದೇಶವಾಗಿದೆ. ಮುಸ್ಲಿಂ ಸಮುದಾಯದ ದೇಶಪ್ರೇಮವನ್ನು ಅನುಮಾನಿಸುವುದು ಅವರ ನಿರಂತರ ಪುವೃತ್ತಿಯಾಗಿದೆ. ಭಾರತದ ಸ್ವಾತಂತ್ರ÷್ಯ ಚಳವಳಿಯಲ್ಲಿ ಭಾಗವಹಿಸದೇ, ಅದಕ್ಕೆ ವಿರುದ್ಧವಾಗಿ ಕೆಲಸ ಮಾಡಿರುವುದರಿಂದಲೇ ಅವರಲ್ಲಿ ರಾಷ್ಟçವಾದದ ಆಶಯ ಮೈಗೂಡಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ದೇಶಪ್ರೇಮಿ ಜನತೆ ಅವರಿಗೆ ಒಂದು ಬಹಿರಂಗ ಸವಾಲನ್ನು ಹಾಕುತ್ತಿದ್ದೇವೆ.
ಸುಹೇಲ್ ಅಹಮದ್, ಜಾಗೃತ ಕರ್ನಾಟಕ


