ಮೈಸೂರು : ಗುಂಬಜ್ ಮಾದರಿಯಲ್ಲಿದೆ ಎಂದು ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುವ ಸಂಸದ ಪತಾಪ್ ಸಿಂಹನಿಗೆ ಗುಂಬಜ್ ಮಾದರಿಯಲ್ಲಿರುವ ಕಟ್ಟಡಗಳನ್ನು ಒಡೆಯಲು ಸಾಧ್ಯವೇ, ಎರಡು ಬಾರಿ ಸಂಸದನಾದವನಿಗೆ ಸಾಮಾನ್ಯ ಜ್ಞಾನ ಎಂಬುದು ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಂಬಜ್ ಮಾದರಿಯಲ್ಲಿದೆ ಎಂದು ಸರ್ಕಾರ ಕಟ್ಟಿಸಿರುವ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನಲು ಅವನ್ಯಾವನ್ರೀ ? ಪ್ರತಾಪ್ ಸಿಂಹ ಏನು ಸ್ವಂತ ಹಣದಿಂದ ಕಟ್ಟಿಸಿರುವುದಲ್ಲ, ಇಂಜಿನಿಯರ್ ಗಳು ಯಾವ ಮಾದರಿಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಿ ಕಟ್ಟಿಸಿದ್ದಾರೆ. ಅದನ್ನು ಬುಲ್ಡೋಜರ್ ತಂದು ಒಡೆಸುತ್ತೇನೆ ಎಂದರೆ ಏನು ಪ್ರತಾಪ್ ಸಿಂಹ ಸ್ವಂತ ಹಣದಿಂದ ಕಟ್ಟಿಸಿದ್ದನಾ? ಎಂದು ಪ್ರಶ್ನಿಸಿದರು.
ನಮ್ಮ ದೇಶವನ್ನು 600 ವರ್ಷಗಳ ಕಾಲ ಮೊಘಲರು ಆಡಳಿತ ನಡೆಸಿದ್ದರು. ಆಗ ಇವರೆಲ್ಲ ಎಲ್ಲಿಗೆ ಹೋಗಿದ್ದರು. ಹಾಗಾದರೆ ಗುಂಬಜ್ ಮಾದರಿಯಲ್ಲಿರುವ ಕಟ್ಡಗಳನ್ನು ಇವರು ಒಡೆಸಲು ಸಾಧ್ಯವೆ? ಸುಮ್ಮನೆ ಇತಿಹಾಸ ತಿರುಚುವ ಕೆಲಸ ಮಾಡಬಾರದು. ಚುನಾವಣೆ ದೃಷ್ಟಿ ಇಟ್ಟುಕೊಂಡು ಮತ ಬ್ಯಾಂಕ್ ಕ್ರೂಢಿಕರಿಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.ಜನ ಬುದ್ಧಿವಂತರಿದ್ದಾರೆ. ಇವರು ಎμÉ್ಟೀ ನಾಟಕ ಆಡಿದರು ಬುದ್ಧಿ ಕಲಿಸಲಿದ್ದಾರೆ ಎಂದರು.
ಸಿದ್ಧರಾಮಯ್ಯ ಅವರನ್ನು ಜೆಡಿಎಸ್, ಬಿಜೆಪಿ ಪಕ್ಷದವರು ಸೋಲಿಸಬೇಕಿಲ್ಲ, ಕಾಂಗ್ರೆಸ್ ನವರೆ ಸೋಲಿಸುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗರಂ ಆದ ಸಿದ್ಧರಾಮಯ್ಯ, ಅದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ, ನಾನು 8 ಬಾರಿ ಗೆದ್ದಿದ್ದೇನೆ. ಹಾಗದರೆ ಇವರುಗಳು ಬಂದು ನನ್ನ ಗೆಲ್ಲಿಸಿದ್ದರಾ? ಜನ ತೀರ್ಮಾನ ಮಾಡೋದು. ಅವರು ಸೋಲಿಸುತ್ತಾರೆ ಇವರು ಸೋಲಿಸುತ್ತಾರೆ ಎಂದರೆ ಆಗುವುದಿಲ್ಲ ಎಂದು ಹೇಳಿದರು.
0 ಕಾಮೆಂಟ್‌ಗಳು