ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿ : 30ಮಂದಿಗೆ ಗಾಯ

 ವರದಿ-ಎನ್.ಕೃಷ್ಣೇಗೌಡ ಪಾಂಡವಪುರ

ಪಾಂಡವಪುರ : ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಪಟೇಲ್ ನಾರಾಯಣಗೌಡ ಅವರ ಪುತ್ರ ಧರ್ಮರಾಜು (50) ಮೃತಪಟ್ಟಿದ್ದು, ಗ್ರಾಮದಲ್ಲಿನ ಜಮೀನಿನಲ್ಲಿ ಧರ್ಮರಾಜು ಅವರ ಶವ ಸಂಸ್ಕಾರ ನೆರವೇರಿಸುವ ವೇಳೆ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆಯೇ ಮರದ ಮೇಲಿದ್ದ ಹೆಜ್ಜೇನು ಏಕಾಏಕಿ ದಾಳಿ ಮಾಡಿದವು ಎನ್ನಲಾಗಿದೆ.
ಈ ವೇಳೆ ಜೇನು ಕಡಿತಕ್ಕೊಳಗಾದ ಗ್ರಾಮದ ನಿವಾಸಿಗಳಾದ ಪಟೇಲ್ ರಮೇಶ್, ಸತ್ಯನಾರಾಯಣ (ಮೊಳ್ಳೆ), ಭರತ್ ಪಟೇಲ್, ಬಾಲೇಗೌಡ, ಎಚ್.ಡಿ.ಶ್ರೀಧರ್, ನಾಗೇಗೌಡ, ದೀಪಕ್, ಅನು, ಭಾವನಾ, ಲಲಿತಾ, ಲಕ್ಷ್ಮೇಗೌಡ, ಜಯರತ್ನಮ್ಮ, ಜಾಹ್ನವಿ, ಆನಂದ, ವೀಣಾ, ಪ್ರಜ್ವಲ್, ವರುಣ್‍ಗೌಡ, ಪುಟ್ಟಮ್ಮ ಹಾಗೂ ಮೂರು ವರ್ಷದ ಮಗು ನೂತನ್ ಪಟೇಲ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ತಕ್ಷಣವೇ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ ನೇತೃತ್ವದಲ್ಲಿ ವೈದ್ಯರಾದ ಡಾ.ಶಿಲ್ಪಶ್ರೀ, ಡಾ.ಶ್ರೀಧರ್, ಡಾ.ನಿತೀನ್, ಡಾ.ಅನುಷಾ ಸ್ಟಾಪ್ ನರ್ಸ್ ಗಳು ಹಾಗೂ ಡಿ ಗ್ರೂಪ್ ನೌಕರರ ತಂಡ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಿ ಉಪಚರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು