ಮೈಸೂರಿನಲ್ಲಿ ಬೆಳ್ಳಂ ಬೆಳಗ್ಗೆ ಎನ್ ಐಎ ದಾಳಿ: ಪಿಎಫ್ ಐ ಮಾಜಿ ಕಾರ್ಯದರ್ಶಿ ಬಂಧನ





ಮೈಸೂರು- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಎನ್ಐಎ ದಾಳಿ ಮಾಡಿ ಪಿಎಫ್ಐ ಮಾಜಿ ಕಾರ್ಯದರ್ಶಿಯನ್ನು ಅರೆಸ್ಟ್ ಮಾಡಲಾಗಿದೆ.

ಮೊಹಮ್ಮದ್ ಸುಲೈಮಾನ್ ಬಂಧಿತ ಆರೋಪಿಯಾಗಿದ್ದು, ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಸುಲೈಮಾನ್ ಮನೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ.

ಇಂದು ಮುಂಜಾನೆ ನಾಲ್ಕು ಗಂಟೆಗೆ ದಿಢೀರ್ ದಾಳಿ ಮಾಡಿ ಸುಲೈಮಾನ್ ವಶಕ್ಕೆ ಪಡೆದ ಎಎನ್ಐ ಅಧಿಕಾರಿಗಳು, ಮೈಸೂರಿನ ಅಜ್ಞಾತ ಸ್ಥಳದಲ್ಲಿ ಸುಲೈಮಾನ್ ವಿಚಾರಣೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು