ಕುರಿ ಕಳ್ಳನ ಬಂಧನ : ಎರಡು ಕುರಿ ವಶ

ವರದಿ- ಶಾರುಕ್ ಖಾನ್, ಹನೂರು

ಹನೂರು : ಕುರಿ ಕಳ್ಳತನದ ಆರೋಪದ ಮೇಲೆ ರಾಮಾಪುರ ಠಾಣೆಯ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿ ಎರಡು ಕುರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಇಂದಿರಾ ಕಾಲೊನಿಯ ವಿಶ್ವ(27) ಎಂದು ಗುರುತಿಸಲಾಗಿದೆ.
 ಇತ್ತಿಚಿಗೆ ಈ ಭಾಗದಲ್ಲಿ‌‌ ಸಾಕಷ್ಟು ಕುರಿಗಳ ಕಳ್ಳತನ ನಡೆದಿದ್ದು, ಪೊಲೀಸರಿಗೆ ತಲೆ ನೋವಾಗಿತ್ತು.
ಇನ್ಸ್ ಪೆಕ್ಟರ್  ನಂಜುಂಡಸ್ವಾಮಿ ಹಾಗೂ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ನೇತೃತ್ವದ ತಂಡ  ಗ್ರಾಮದ ಮಹದೇಶ್ವರ ದೇವಾಲಯದ ಬಳಿ  ದಾಳಿ ನಡೆಸಿ ಕುರಿ ಕಳ್ಳನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸೈಯದ್ ಮುಷರಫ್, ನಾಗೇಂದ್ರ, ರಮೇಶ್, ಲಿಯಾಕತ್ ಆಲಿಖಾನ್ ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು